newsics.com
ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ಭಾರತ 219 ರನ್ ಗಳಿಗೆ ಸರ್ವ ಪತನ ಕಂಡಿದೆ. ಭಾರತದ ಅಗ್ರ ಕ್ರಮಾಂಕದ ಆಟಗಾರರು ಭಾರೀ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಶ್ರೇಯಸ್ ಅಯ್ಯರ್ ಹೊರತುಪಡಿಸಿ ಅಗ್ರ ಕ್ರಮಾಂಕದ ಯಾವುದೇ ಆಟಗಾರ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.
ವಾಷಿಂಗ್ಟನ್ ಸುಂದರ್ ಅಂತಿಮ ಹಂತದಲ್ಲಿ ಸಿಡಿಸಿದ 51 ರನ್ ಗಳ ನೆರವಿನಿಂದ ಭಾರತ 219 ರನ್ ಗಳಿಸಿದೆ. ರಿಷಬ್ ಪಂತ್ ಇಂದಿನ ಪಂದ್ಯದಲ್ಲಿ ಕೂಡ ಕಳಪೆ ಪ್ರದರ್ಶನ ನೀಡಿದರು. ಈ ಮೂಲಕ ಪಂತ್ ಕೈ ಬಿಡಿ ಎನ್ನು ವ ಆಗ್ರಹಕ್ಕೆ ಮತ್ತೊಮ್ಮೆ ಗುರಿಯಾಗಿದ್ದಾರೆ.
ಬೌಲರ್ ವಾಷಿಂಗ್ಟನ್ ಸುಂದರ್ ಗಳಿಸಿದ 51 ರನ್ ಭಾರತದ ಆಟಗಾರರ ಅತ್ಯಧಿಕ ರನ್ ಆಗಿದೆ.