newsics.com
ಅಮೆರಿಕ: ಚೀನಾ ಒಡೆತನದ ವಿ ಚಾಟ್ ಮತ್ತು ಟಿಕ್ ಟಾಕ್ ಅಪ್ಲಿಕೇಶನ್‌ಗಳ ನವೀಕರಣ ಮತ್ತು ಡೌನ್‌ಲೋಡ್ ಪ್ರಕ್ರಿಯೆ ಸೆ.20ರಿಂದ ಅಮೆರಿಕದಲ್ಲೂ ನಿಷೇಧಗೊಳ್ಳಲಿದೆ.
ಶುಕ್ರವಾರ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಈ ವಿಷಯ ತಿಳಿಸಿದ್ದು, ವಿ ಚಾಟ್ ಮತ್ತು ಅದರ ಮೂಲ ಕಂಪನಿ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ನಗದು ವರ್ಗಾವಣೆಯನ್ನ ಯುಎಸ್ ನಿಷೇಧಿಸುತ್ತಿದೆ ಎಂದು ಹೇಳಿದ್ದಾರೆ.
ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ವಿ ಚಾಟ್ ಸ್ಥಗಿತಗೊಳಿಸಲಾಗುವುದು ಎಂದು ವಿಲ್ಬರ್ ರಾಸ್ ಫಾಕ್ಸ್ ತಿಳಿಸಿದ್ದು, ಅಮೆರಿಕನ್ನರು ಇನ್ನೂ ಚೀನಾದಲ್ಲಿ ಪಾವತಿಗಳಿಗಾಗಿ ವಿ ಚಾಟ್ ಬಳಸಲು ಸಾಧ್ಯವಾಗುವುದಿಲ್ಲ. ಮೂಲ ಟಿಕ್ಟಾಕ್ ನವೆಂಬರ್ 12 ರವರೆಗೆ ಇರಲಿದೆಯಾದರೂ ಭಾನುವಾರ ರಾತ್ರಿಯಿಂದ ಬಳಕೆದಾರರಿಗೆ ಪ್ರವೇಶ ನವೀಕರಣ ಮಾಡಲಾಗುವುದಿಲ್ಲ ಎಂದಿದ್ದಾರೆ.
ಅಮೆರಿಕದಲ್ಲೂ ಸೆ.20ರಿಂದ ಟಿಕ್ ಟಾಕ್, ವಿ ಚಾಟ್ ನಿಷೇಧ
Follow Us