newsics.com
ಫ್ಲೋರಿಡಾ: ಮಗುವೊಂದು ಮನೆಯಲ್ಲಿದ್ದ ಬುಲೆಟ್ ತುಂಬಿದ ಗನ್ ಹಿಡಿದು ಆಟವಾಡುತ್ತಿದ್ದ ವೇಳೆ ತಾಯಿಗೆ ಗುಂಡು ಹಾರಿಸಿದ ಘಟನೆ ನಡೆದಿದೆ.
21 ವರ್ಷದ ಶಮಯ ಲಿನ್ ಕೆಲಸಕ್ಕೆ ಸಂಬಂಧಿಸಿದ ಕರೆಯಲ್ಲಿದ್ದಾಗ ಮಗು ಗುಂಡು ಹಾರಿಸಿದ್ದು ಮಹಿಳೆ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ.
ಕರೆಯಲ್ಲಿರುವ ವ್ಯಕ್ತಿ ತಕ್ಷಣ ರಕ್ಷಣೆಗೆಂದು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದಳು.
ಮನೆಯಲ್ಲಿ ಗನ್ ಅನ್ನು ಸುರಕ್ಷಿತ ಸ್ಥಳದಲ್ಲಿಡದೇ ಇರುವುದರಿಂದ ಮಗು ಆಟವಾಡುವಾಗ ಗುಂಡು ಹಾರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಂದಿಗೆ ಗನ್ ಅನ್ನು ಮನೆಯಲ್ಲಿ ಇಟ್ಟುಕೊಂಡ ಕುರಿತು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ತಾಲಿಬಾನಿಗಳ ಅಟ್ಟಹಾಸದ ನಡುವೆಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಅಫ್ಘಾನ್ ಅಧ್ಯಕ್ಷ