ವಾಷಿಂಗ್ಟನ್: ಜಗತ್ತಿನ ಯಾವುದೇ ಮೂಲೆಯಲ್ಲಿ ಅಮೆರಿಕನ್ನರಿಗೆ ಯಾರೇ ಬೆದರಿಕೆ ಒಡ್ಡಿದರೂ ಅಗತ್ಯ ಕ್ರಮ ಕೈಗೊಳ್ಳಲು ನಾವು ಬದ್ಧ ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸೇನಾ ನಾಯಕನ ಹತ್ಯೆಗೈದ ಅಮೆರಿಕಗೆ ಇರಾನ್ ಪ್ರತೀಕಾರದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆರಿಕ ಈ ಸಂದೇಶ ರವಾನಿಸಿದೆ.
ಇರಾನ್ ಸೇನಾ ನಾಯಕ ಜನರಲ್ ಕಾಸಿಂ ಸೊಲೆಮಾನ್ ಹತ್ಯೆಯ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟ ಮತ್ತಷ್ಟು ಉಲ್ಬಣಗೊಂಡಿದೆ.
ವೈಟ್ಹೌಸ್ ಶೇರ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಟ್ರಂಪ್, ಜಗತ್ತಿನ ಯಾವುದೇ ದೇಶಗಳಿಗೆ ಹೋಲಿಸಿದರೆ ಅಮೆರಿಕವು ಅತ್ಯುತ್ತಮ ಸೇನೆಯನ್ನು ಹೊಂದಿದೆ. ನಾವು ಉತ್ತಮವಾದ ಗುಪ್ತಚರ ಇಲಾಖೆಯನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಅಮೆರಿಕನ್ನರನ್ನು ಬೆದರಿಸಿದರೆ ಕಠಿಣ ಕ್ರಮ; ವಿಶ್ವಕ್ಕೆ ಅಮೆರಿಕ ಎಚ್ಚರಿಕೆ
Follow Us