newsics.com
ಕೊಲಂಬೊ: ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಇಂಧನ ಕೊರತೆ ವಿಪರೀತವಾಗಿದೆ.ಆರ್ಥಿಕ ಬಿಕ್ಕಟ್ಟಿನ ಮಧ್ಯೆ ದೇಶದ ಪಶ್ಚಿಮ ಪ್ರಾಂತ್ಯದ ಇಂಧನ ಕೇಂದ್ರದಲ್ಲಿ ಐದು ದಿನಗಳ ಕಾಲ ಸರತಿ ಸಾಲಿನಲ್ಲಿ ಕಾಯುತ್ತಿದ್ದ 63 ವರ್ಷದ ಟ್ರಕ್ ಚಾಲಕ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವ್ಯಕ್ತಿ ತನ್ನ ವಾಹನದೊಳಗೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ದೇಶದ ಇಂಧನ ಕೇಂದ್ರಗಳಲ್ಲಿ ಸುದೀರ್ಘ ಕಾಯುವಿಕೆಯಿಂದ ಸಂಭವಿಸಿದ 10 ನೇ ಸಾವು ಎಂದು ಹೇಳಲಾಗುತ್ತದೆ.