ವಾಷಿಂಗ್ಟನ್: ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಂದೂಡಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ನೀಡಿದ್ದಾರೆ.
ಕೊರೋನಾ ಪರಿಸ್ಥಿತಿ ಹಾಗೂ ಮತದಾನದಲ್ಲಿ ವಂಚನೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕೆಂದು ಟ್ರಂಪ್ ಹೇಳಿದ್ದಾರೆ. ‘ಜನರು ಸುರಕ್ಷಿತವಾಗಿ ಮತ್ತು ಸಮರ್ಪಕವಾಗಿ ಮತದಾನ ಮಾಡಲು ಸಾಧ್ಯವಾಗುವಂತೆ ಚುನಾವಣೆಯನ್ನು ಮುಂದೂಡಬಹುದೇ? ಎಂದು ಟ್ರಂಪ್ ಟ್ವಿಟರ್ನಲ್ಲಿ ಕೇಳಿದ್ದಾರೆ. ಯೂನಿವರ್ಸಲ್ ಮೇಲ್-ಇನ್ ವೋಟಿಂಗ್ (ಆಬ್ಸೆಂಟೀ ವೋಟಿಂಗ್ ಅಲ್ಲ, ಅದು ಒಳ್ಳೆಯದೇ) ಮೂಲಕ 2020ರ ಮತದಾನವು ಚುನಾವಣಾ ಇತಿಹಾಸದಲ್ಲೇ ಅತ್ಯಂತ ಅನಿಯಮಿತ ಹಾಗೂ ವಂಚಕ ಮತದಾನವಾಗಲಿದೆ ಎಂದೂ ಟ್ವೀಟ್ ನಲ್ಲಿ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆ ಮುಂದೂಡಲು ಟ್ರಂಪ್ ಸಲಹೆ
Follow Us