NEWSICS.COM
ಅಮೆರಿಕ: ಅಮೆರಿಕದ ಜನರ ವಿರುದ್ಧ “ದೊಡ್ಡ ವಂಚನೆ” ನಡೆಯುತ್ತಿದೆ. ಇದರ ವಿರುದ್ಧ ತಾವು ಸುಪ್ರೀಂ ಕೋರ್ಟ್ ನಲ್ಲಿ ಹೋರಾಡುವುದಾಗಿ ಟ್ರಂಪ್ ಹೇಳಿದ್ದಾರೆ.
ಇಂದು ಬೆಳಗ್ಗೆ ಶ್ವೇತಭವನದ ಪೂರ್ವ ಕೊಠಡಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಈಗಾಗಲೇ ಗೆದ್ದಾಗಿದೆ ಎಂದು ಹೇಳಿದ್ದಾರೆ.
ಇದ್ದಕ್ಕಿದ್ದಂತೆ ಎಲ್ಲವೂ ನಿಂತುಹೋಯಿತು. ಇದು ಅಮೆರಿಕಾದ ಸಾರ್ವಜನಿಕರಿಗೆ ಮಾಡಿದ ವಂಚನೆ. ಇದು ನಮ್ಮ ದೇಶಕ್ಕೆ ದೊಡ್ಡ ಮುಜುಗರ. ನಾವು ಈ ಚುನಾವಣೆಯಲ್ಲಿ ಗೆದ್ದಿದ್ದೇವೆ” ಎಂದು ಟ್ರಂಪ್ ವಾದಿಸಿದ್ದಾರೆ.
ಈಗಾಗಲೇ ಆಮೆರಿಕ ಅಧ್ಯಕ್ಷೀಯ ಚುನಾವಣಾ ಮತ ಎಣಿಕೆ ತೀವ್ರ ಹಣಾಹಣಿ ನಡೆಯುತ್ತಿದ್ದು ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪೊಲೀಸರ ದಾಳಿ: ಹಳಿತಪ್ಪಿಸಿದ ರಿಪಬ್ಲಿಕ್ ಸುದ್ದಿ ವಾಹಿನಿಯ ಅಮೆರಿಕ ಫಲಿತಾಂಶ ಪ್ರಸಾರ