ವಾಷಿಂಗ್ಟ್ ನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂಗವಾಗಿ ಇಂದು ನಡೆದ ಮೊದಲ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಕೊರೋನಾ ಮಹಾಮಾರಿ ಸದ್ದು ಮಾಡಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮಾಕ್ರಟ್ ಅಭ್ಯರ್ಥಿ ಜೊ ಬಿಡೆನ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಕೊರೋನಾ ನಿಯಂತ್ರಿಸಲು ತೆಗೆದುಕೊಂಡಿರುವ ಕ್ರಮಗಳನ್ನು ಟ್ರಂಪ್ ಸಮರ್ಥಿಸಿಕೊಂಡರು.
ಇದಕ್ಕೆ ಜೊ ಬಿಡೆನ್ ವಿರೋಧ ವ್ಯಕ್ತಪಡಿಸಿದರು. ಕೊರೋನಾ ಮಾಹಾಮಾರಿಯಲ್ಲಿ ಚೀನಾದ ಪಾತ್ರದ ಬಗ್ಗೆ ಬಿಡೆನ್ ಯಾವುದೇ ಹೇಳಿಕೆ ನೀಡಿಲ್ಲ ಎಂದು ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿದರು. ಕೊರೋನಾ ನಿಯಂತ್ರಿಸಲು ವಿಫಲವಾಗಿದ್ದೇನೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದರು.
ಭಾರತ, ರಷ್ಯಾ ಮತ್ತು ಚೀನಾ ಕೊರೋನಾಕ್ಕೆ ಬಲಿಯಾದವರ ನಿಜವಾದ ಸಂಖ್ಯೆ ಬಿಡುಗಡೆಮಾಡಿಲ್ಲ ಎಂದು ಟ್ರಂಪ್ ಇದೇ ಸಂದರ್ಭದಲ್ಲಿ ಆರೋಪಿಸಿದರು