ವಾಷಿಂಗ್ಟ್ ನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುಧ್ದ ಭಾರೀ ತೆರಿಗೆ ವಂಚನೆ ಆರೋಪ ಹೊರಿಸಲಾಗಿದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ಸಂಬಂಧ ಸುದೀರ್ಘ ವರದಿ ಪ್ರಕಟಿಸಿದೆ. ಟ್ರಂಪ್ ಕೇವಲ 750 ಡಾಲರ್ ತೆರಿಗೆಯಾಗಿ ಪಾವತಿಸಿದ್ದಾರೆ . ಇದು 2016ರಲ್ಲಿ ಪಾವತಿಸಿದ್ದಾಗಿದೆ. ಆ ಬಳಿಕ ಯಾವುದೇ ತೆರಿಗೆ ಪಾವತಿಸಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
ಈ ಎಲ್ಲ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ. ಇದು ಸುಳ್ಳು ವರದಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಕಾನೂನು ಅನ್ವಯ ಅಧ್ಯಕ್ಷರು ತಮ್ಮ ತೆರಿಗೆ ಪಾವತಿ ವಿಷಯ ಬಹಿರಂಗಪಡಿಸಬೇಕಾದ ಅನಿವಾರ್ಯತೆ ಇಲ್ಲ. ಆದರೂ ಇದುವರೆಗೆ ಹೆಚ್ಚಿನ ಅಧ್ಯಕ್ಷರು ತಮ್ಮ ತೆರಿಗೆ ಸಂಬಂಧಿತ ಮಾಹಿತಿ ಹಂಚಿಕೊಂಡಿದ್ದಾರೆ.
1970ರ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್ ತೆರಿಗೆ ವಿಷಯದಲ್ಲಿ ರಹಸ್ಯ ಕಾಪಾಡುತ್ತಿರುವ ಅಧ್ಯಕ್ಷರ ಸಾಲಿಗೆ ಸೇರಿದ್ದಾರೆ ಡೆಮಾಕ್ರಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜತೆ ಸಾರ್ವಜನಿಕ ಸಂವಾದಕ್ಕೆ ಬೆರಳೆಣಿಕೆಯ ದಿನಗಳು ಬಾಕಿ ಇರುವಂತೆಯೇ ಟ್ರಂಪ್ ಈ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ..