Monday, April 12, 2021

ಚೀನಾ ಸರ್ಕಾರದ 1.70 ಲಕ್ಷ ಟ್ವಿಟರ್ ಅಕೌಂಟ್ ರದ್ದು

ವಾಷಿಂಗ್ಟನ್:  ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾ ಸರ್ಕಾರಕ್ಕೆ ಸೇರಿದ 1.70 ಅಕೌಂಟ್  ಟ್ವಿಟರ್ ರದ್ದು ಮಾಡಿದೆ. ವಿಶ್ವದಲ್ಲಿ ಚೀನಾ ನೀತಿ ಪರ ಜನಾಭಿಪ್ರಾಯ ರೂಪಿಸಲು ಈ ಟ್ವಿಟರ್ ಖಾತೆಗಳನ್ನು ಬಳಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಂಕಾಂಗ್ ಪ್ರತಿಭಟನೆ, ಕೋವಿಡ್-19 ಬೆಳವಣಿಗೆ ಮತ್ತು ಅಮೆರಿಕದಲ್ಲಿ ನಡೆಯುತ್ತಿರುವ ವರ್ಣ ಭೇದ ವಿರೋಧಿ ಪ್ರತಿಭಟನೆ ವಿಷಯಗಳನ್ನು ಮುಂದಿಟ್ಟುಕೊಂಡು  ಜಾಗತಿಕ ಮಟ್ಟದಲ್ಲಿ ತನ್ನ ನಿಲುವು ಪ್ರಚಾರ ಪಡಿಸಲು ಈ ಖಾತೆಗಳನ್ನು ಬಳಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇದರಲ್ಲಿ ಶೇಕಡ 78.5 ಖಾತೆಗಳು ಯಾವುದೇ ಹಿಂಬಾಲಕರನ್ನು ಹೊಂದಿರಲಿಲ್ಲ. ಶೇಕಡ 95 ಅಕೌಂಟ್ ದಾರರ  ಹಿಂಬಾಲಕರು ಎಂಟಕ್ಕಿಂತ ಕಡಿಮೆಯಾಗಿತ್ತು. ಚೀನಾದ ಹೊರಗಡೆ ಈ ಎಲ್ಲ ಖಾತೆಗಳನ್ನು ನಿಭಾಯಿಸಲಾಗುತ್ತಿತ್ತು ಎಂಬುದನ್ನು ಕೂಡ ಪತ್ತೆ ಹಚ್ಚಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!