ನ್ಯೂಯಾರ್ಕ್: ಆನ್ ಲೈನ್ ಟ್ರೋಲಿಂಗ್ ಅನ್ನು ತಡೆಹಿಡಿಯುವ ನಿಟ್ಟಿನಲ್ಲಿ ಪೋಸ್ಟ್ ಗಳಿಗೆ ಪ್ರತಿಕ್ರಿಯೆ ನೀಡುವರ ಸಂಖ್ಯೆಗೆ ಮಿತಿ ಹೇರಲು ಟ್ವಿಟರ್ ಮುಂದಾಗಿದೆ.
ಇತ್ತೀಚೆಗೆ ಲಾಸ್ ವೇಗಸ್ ಗ್ರಾಹಕರ ಎಲೆಕ್ಟ್ರಾನಿಕ್ ಕಾರ್ಯಕ್ರಮವೊಂದರಲ್ಲಿ ಟ್ವಿಟರ್ ಈ ಘೋಷಣೆ ಮಾಡಿದೆ. ಈ ಹೊಸ ವ್ಯವಸ್ಥೆಯಲ್ಲಿ ಜನರು ಪೋಸ್ಟ್ ಮಾಡುವ ಟ್ವೀಟ್ ಗಳು ಸಾರ್ವಜನಿಕರಿಗೆ ಗೋಚರಿಸುತ್ತದೆಯಾದರೂ, ನಿರ್ದಿಷ್ಟ ಜನರು ಮಾತ್ರ ಅದಕ್ಕೆ ಪ್ರತಿಕ್ರಿಯೆ ನೀಡುವಂತೆ ಸೆಟ್ಟಿಂಗ್ ಮಾಡಲು ಅವಕಾಶವಿರುತ್ತದೆ.