ನ್ಯೂಯಾರ್ಕ್: ಡ್ರಾಗನ್ ಎಂಡೆವರ್ ಕ್ಯಾಪ್ಸೂಲ್ ಬಾಹ್ಯಾಕಾಶ ನೌಕೆ ಭೂಮಿಯೆಡೆಗೆ ಪ್ರಯಾಣ ಆರಂಭಿಸಿದೆ.
ಅಮೆರಿಕದ ಗಗನಯಾತ್ರಿಗಳಾದ ಡ್ಯೂಗ್ ಹುರ್ಲೆ ಹಾಗೂ ಬಾಬ್ ಬೆಹ್ನೆಕಿನ್ ಅವರನ್ನು ಹೊತ್ತ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿದ್ದು, ಭಾನುವಾರ ಫ್ಲಾರಿಡಾದ ಕರಾವಳಿಯಲ್ಲಿ ಇಳಿಯಲಿದ್ದಾರೆ. ಆದರೆ ಇಲ್ಲಿ ಚಂಡಮಾರುತವಿದ್ದು, ಆತಂಕಕ್ಕೆ ಕಾರಣವಾಗಿದೆ.
ಸುಮಾರು ಎರಡು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯವಿದ್ದ ಬಳಿಕ ಅವರು ಭೂಮಿಗೆ ಮರಳುತ್ತಿದ್ದಾರೆ. ಡ್ರಾಗನ್ ಎಂಡೆವರ್ ನೌಕೆಯನ್ನು ಅಮೆರಿಕದ ವಾಣಿಜ್ಯ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ಎಕ್ಸ್ ಅಭಿವೃದ್ಧಿಪಡಿಸಿದೆ.
ಡ್ರಾಗನ್ ಎಂಡೆವರ್ 2011ರ ಬಳಿಕ ಅಮೆರಿಕದ ನೆಲದಿಂದ ಉಡಾವಣೆಗೊಂಡ ಪ್ರಪ್ರಥಮ ಬಾಹ್ಯಾಕಾಶ ನೌಕೆಯಾಗಿದೆ. ಮನುಷ್ಯರನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲು ವಾಣಿಜ್ಯಾತ್ಮಕವಾಗಿ ಅಭಿವೃದ್ಧಿಪಡಿಸಿದ ಮೊದಲ ಗಗನನೌಕೆ ಇದಾಗಿದೆ.
ಭೂಮಿಯತ್ತ ಅಮೆರಿಕದ ಇಬ್ಬರು ಗಗನಯಾತ್ರಿಗಳು
Follow Us