newsics.com
ವಾಷಿಂಗ್ಟನ್: ಉನ್ನತ ಶಿಕ್ಷಣ ಪಡೆಯಲು ಅಮೆರಿಕಕ್ಕೆ ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸರೋವರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ತೆಲಂಗಾಣ ಮೂಲದವರಾಗಿದ್ದಾರೆ.
ಅಮೆರಿಕದ ಮಿಸ್ಸೋರಿಯಲ್ಲಿ ಇರುವ Ozarks ಸರೋವರದಲ್ಲಿ ಈ ದುರಂತ ಸಂಭವಿಸಿದೆ. ಮೃತಪಟ್ಟವರನ್ನು ಉತೇಜ್ ಕುಮಾರ್ ಮತ್ತು ಶಿವ ಕಲ್ಲಿಗಾರಿ ಎಂದು ಗುರುತಿಸಲಾಗಿದೆ.
ಇಬ್ಬರೂ ಸಂತ ಲೂಯಿಸ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದರು.
ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆ ತರಲು ಅಗತ್ಯ ಇರುವ ಎಲ್ಲ ಸಹಕಾರ ನೀಡುವುದಾಗಿ ತೆಲಂಗಾಣ ಸಚಿವ ಕೆ ಟಿ ಆರ್ ಭರವಸೆ ನೀಡಿದ್ದಾರೆ