Tuesday, October 4, 2022

ಆಕ್ಸ್‌ಫರ್ಡ್ ವಿವಿ ಲಸಿಕೆಯಿಂದ ಯುವಕರು, ವೃದ್ಧರಲ್ಲಿ ಏಕರೀತಿಯ ಫಲಿತಾಂಶ

Follow Us

newsics.com
ರಿಯೋ ಡಿ ಜನೈರೋ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ 19 ಲಸಿಕೆ ಯುವ ಮತ್ತು ವೃದ್ಧರಿಗೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಆಸ್ಟ್ರಾಜೆನೆಕಾ ಹೇಳಿದೆ.
ಲಸಿಕೆಯ 3ನೇ ಹಂತದ ಪ್ರಯೋಗ ಅಮೆರಿಕ, ಯುಕೆ, ಬ್ರೆಜಿಲ್, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಲಸಿಕೆ ಅಭಿವೃದ್ಧಿಯಲ್ಲಿ ಭಾರತದ ಪುಣೆಯ ಸಿರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ)ದೊಂದಿಗೆ ಸಹ ಕೈ ಜೋಡಿಸಿದೆ.
ಈ ಲಸಿಕೆ ಯುವಕರು, ವೃದ್ಧರಲ್ಲಿ ಒಂದೇ ಮಾದರಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೋವಿಡ್‌ ಸೋಂಕಿನಿಂದಾಗಿ ಮುಕ್ತವಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಆಸ್ಟ್ರಾಜೆನೆಕಾ ಸ್ಪಷ್ಟಪಡಿಸಿದೆ.
ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಕೋವಿಡ್ 19 ಲಸಿಕೆ ಅಭಿವೃದ್ಧಿಪಡಿಸುತ್ತಿವೆ.

ದೇಶದ ಎಲ್ಲರಿಗೂ ಕೊರೋನಾ ಲಸಿಕೆ ಉಚಿತ- ಕೇಂದ್ರ ಸಚಿವ ಸಾರಂಗಿ

ಕೊರೋನಾ ವೈರಸ್‌ನಿಂದ ಹೆಚ್ಚು ಬಾಧಿತಗೊಂಡ ವಯಸ್ಸಾದವರಲ್ಲಿ ಲಸಿಕೆ ರಕ್ಷಣಾತ್ಮಕ ಪ್ರತಿಕಾಯಗಳು, ಟಿ ಕೋಶಗಳನ್ನು ಉತ್ತೇಜಿಸುತ್ತದೆ ಎಂದು ಫೈನಾನ್ಷಿಯಲ್ ಟೈಮ್ಸ್ ಹೇಳಿದೆ. ಕೊರೋನಾ ಸಾಂಕ್ರಾಮಿಕದಿಂದ ಬಳಲುತ್ತಿರುವ ಜಗತ್ತಿಗೆ ಆಕ್ಸ್‌ಫರ್ಡ್ ಲಸಿಕೆ ಆಶಾ ಜನಕವಾಗಿ ಕಂಡುಬಂದಿದೆ. ಲಸಿಕೆಯ ಪ್ರಯೋಗಕ್ಕೆ ಒಳಗಾಗಿರುವ ಸ್ವಯಂ ಸೇವಕರ ವರದಿಯ ಆಧಾರದ ಮೇಲೆಯೇ ಈ ಮಾಹಿತಿ ತಿಳಿದುಬಂದಿದೆ. ವೃದ್ಧರ ಮೇಲೆ ಈ ಲಸಿಕೆ ಪ್ರಯೋಗ ಮಾಡಿದಾಗಲೂ ಒಂದೇ ಮಾದರಿ ಫಲಿತಾಂಶ ಬಂದಿದೆ ಎಂದು ಹೇಳಿದೆ. ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಲಸಿಕೆ 2021ರ ಜನವರಿಯಲ್ಲಿ ಬರಬಹುದು ಎಂಬ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ 1603, ರಾಜ್ಯದಲ್ಲಿ 3130 ಮಂದಿಗೆ ಕೊರೋನಾ, 42 ಜನ ಬಲಿ

ಟಿ -20 ಸರಣಿ: ಭಾರತ ತಂಡ ಪ್ರಕಟ

ಜ್ಯೋತಿಷಿ ಬಂಧನ; ಹುಲಿ, ಕೃಷ್ಣಮೃಗ ಚರ್ಮ ವಶ

ಮತ್ತಷ್ಟು ಸುದ್ದಿಗಳು

vertical

Latest News

ಚಡ್ಡಿಗಳೇ ಎಚ್ಚರ – ಪಿಎಫ್‍ಐ ನಾವು ಮರಳಿ ಬರುತ್ತೇವೆ, ರಸ್ತೆ ಮೇಲೆ ಎಚ್ಚರಿಕೆಯ ಬರಹ

newsics.com ಮಂಗಳೂರು: PFI ಬ್ಯಾನ್ ಬೆನ್ನಲ್ಲೇ  ಮಂಗಳೂರಿನ ರಸ್ತೆಯೊಂದರ ಮೇಲೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಯಿಂದ ಎಚ್ಚರಿಕೆಯ ಬರಹವೊಂದನ್ನು ಬರೆಯಲಾಗಿದೆ. ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ...

ಹಿಮಕುಸಿತಕ್ಕೆ ಸಿಲುಕಿ 20 ಪರ್ವತಾರೋಹಿಗಳ ಸಾವಿನ ಶಂಕೆ

newsics.com .ಡೆಹ್ರಾಡೂನ್:  ಉತ್ತರಾಖಂಡ್ ನಲ್ಲಿ ಭೀಕರ ದುರಂತ ಸಂಭವಿಸಿದೆ ಉತ್ತರಾಖಂಡ್ ನ ಘರ್ವಾಲ್ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 20 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ರಕ್ಷಣಾ ಪಡೆ...

ಜಮ್ಮು, ರಜೌರಿಯಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ

newsics.com ಶ್ರೀನಗರ: ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಮತ್ತು ರಜೌರಿಯಲ್ಲಿ ಇಂಟರ್ ನೆಟ್ ಸೇವೆಯನ್ನು ತಾತ್ಕಲಿಕವಾಗಿ ರದ್ದುಪಡಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಮಿತ್ ಈಗಾಗಲೇ ಜಮ್ಮು...
- Advertisement -
error: Content is protected !!