Tuesday, April 13, 2021

ಚೈನೀಸ್ ವಿಮಾನ ಸಂಚಾರ ನಿಷೇಧಿಸಿದ ಅಮೆರಿಕ

ವಾಷಿಂಗ್ಟನ್: ಜೂನ್ 16ರಿಂದ ಚೀನಾ ವಿಮಾನಗಳ ಹಾರಾಟವನ್ನು ಅಮೆರಿಕ ರದ್ದುಪಡಿಸಿದೆ. ಇದರೊಂದಿಗೆ ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಪ್ರಯಾಣ ಕ್ಷೇತ್ರದಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಚೈನೀಸ್ ವಿಮಾನಗಳ ಸಂಚಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಸಾರಿಗೆ ಇಲಾಖೆಯೂ ಜೂನ್ 16ರಿಂದ ಚೀನಾದ 4 ವಿಮಾನಯಾನ ಕಂಪನಿಗಳ ಎಲ್ಲಾ ಪ್ರಯಾಣಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.
ಚೈನೀಸ್ ವಿಮಾನಗಳ ಸಂಚಾರ ನಿಷೇಧಿಸುವ ಮೂಲಕ ಅಮೆರಿಕ ಚೀನಾಗೆ ತಿರುಗೇಟು ನೀಡಿದೆ. ಬೀಜಿಂಗ್‌ಗೆ ಯುಎಸ್ ವಿಮಾನ ಸಂಚಾರ ಮಾಡಲು ಅನುಮತಿ ನೀಡುವಂತೆ ಅಮೆರಿಕ ಸಾರಿಗೆ ಇಲಾಖೆ ಬೇಡಿಕೆ ಇಟ್ಟಿತ್ತು. ಸುದೀರ್ಘ ಲಾಕ್‌ಡೌನ್‌ ಬಳಿಕ ಮತ್ತೆ ಸಂಚಾರ ಆರಂಭಿಸಲು ಯುಎಸ್ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಅಮೆರಿಕ ವಿಮಾನ ಸಂಚಾರಕ್ಕೆ ಚೈನೀಸ್ ಸರ್ಕಾರ ನಿರಾಕರಣೆ ಮಾಡಿತ್ತು ಎನ್ನಲಾಗಿದೆ. ಇದರಿಂದ ಕೆರಳಿರುವ ಅಮೆರಿಕ ಏರ್ ಚೀನಾ, ಚೀನಾ ಈಸ್ಟರ್ನ್ ಏರ್ಲೈನ್ಸ್ ಕಾರ್ಪ್, ಚೀನಾ ಸದರ್ನ್ ಏರ್ಲೈನ್ಸ್ ಕೋ ಮತ್ತು ಹೈನಾನ್ ಏರ್ಲೈನ್ಸ್ ಹೋಲ್ಡಿಂಗ್ ಕೋ ಸಂಚಾರವನ್ನು ನಿರ್ಬಂಧ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!