Tuesday, April 13, 2021

ಅಮೆರಿಕ ನೌಕಾಪಡೆಗೆ ಕಪ್ಪು ಮಹಿಳೆ ನೇಮಕ!

ಕಿಂಗ್ಸ್‌ವಿಲ್ಲೆ: ಇದೇ ಮೊದಲ ಬಾರಿಗೆ ಅಮೆರಿಕ ನೌಕಾಪಡೆಗೆ ಕಪ್ಪು ಜನಾಂಗದ ಮಹಿಳೆ ಯುದ್ಧ ವಿಮಾನದ ಪೈಲಟ್‌ ಆಗಿ ನೇಮಕಗೊಂಡಿದ್ದಾರೆ. ಶೀಘ್ರದಲ್ಲೆ ಫ್ಲೈಟ್‌ ಆಫೀಸರ್‌ ಹುದ್ದೆ ಅಲಂಕರಿಸಲಿದ್ದಾರೆ.
ಲೆಫ್ಟಿನೆಂಟ್‌ ಜೆ.ಜಿ. ಮೇಡ್‌ಲೈನ್‌ ಸ್ವೀಗಲ್‌ ಎಂಬಾಕೆ ನೌಕಾಪಡೆ ಶಾಲೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದು, 1974ರಲ್ಲಿ ರೋಸ್‌ಮೇರಿ ಮ್ಯಾರಿನರ್‌ ಟ್ಯಾಕ್ಟಿಕಲ್‌ ಫೈಟರ್‌ ಜೆಟ್‌ನಲ್ಲಿ ಹಾರಾಟ ನಡೆಸಿದ್ದರು.
45 ವರ್ಷಗಳ ಬಳಿಕ ಮತ್ತೆ ಈ ಸಾಧನೆಗೆ ಸ್ವೀಗಲ್‌ ಸಾಕ್ಷಿಯಾಗುತ್ತಿದ್ದು, ಕಪ್ಪು ಮಹಿಳೆಯ ನೇಮಕವನ್ನು ಅಮೆರಿಕ ನೌಕಾಪಡೆ ಇತಿಹಾಸ ಸೃಷ್ಟಿ ಅಂತಲೇ ಬಣ್ಣಿಸಿದೆ. ಜಾರ್ಜ್‌ ಫ್ಲಾಯ್ಡ ಹತ್ಯೆ ವಿರೋಧದ ಕಾವಿನಲ್ಲಿರುವ ಅಮೆರಿಕದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!