Thursday, August 18, 2022

ಕೋರ್ಟ್‌ ನಿರ್ಧಾರ ಖಂಡಿಸಿ ಸೆಕ್ಸ್‌ ಮುಷ್ಕರ ಘೋಷಿಸಿದ ಮಹಿಳೆಯರು

Follow Us

newsics.com

ವಾಷಿಂಗ್ಟನ್: ಯುಎಸ್ ಸುಪ್ರೀಂ ಕೋರ್ಟ್ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸಿದ ಹಿನ್ನಲೆಯಲ್ಲಿ ದೇಶದ ವಿವಿಧ ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಈ ಕುರಿತು ಟ್ವಿಟರ್‌ನಲ್ಲಿ #SexStrike ಮೂಲಕ ಮಹಿಳೆಯರು ಅಭಿಯಾನವನ್ನು ನಡೆಸುತ್ತಿದ್ದು, ಪುರುಷರ ಬೇಬಲವನ್ನೂ ಬಯಸುತ್ತಿದ್ದಾರೆ. ಹ್ಯಾಷ್‌ಟ್ಯಾಗ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ. ಇದರೊಂದಿಗೆ #Abstinence ಕೂಡ Twitter ನಲ್ಲಿ ಟ್ರೆಂಡ್ ಆಗಿದೆ.

ಈ ವೇಳೆ ಕಾನೂನಿನ ವಿರುದ್ಧ ಸಿಡಿದೆದ್ದ ಅನೇಕ ಮಹಿಳೆಯರು, ನಾವು ಅನಗತ್ಯ ಗರ್ಭಧಾರಣೆಯ ಅಪಾಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಹೀಗಾಗಿ ಇನ್ನು ಮುಂದೆ ಯಾವುದೇ ಪುರುಷನೊಂದಿಗೆ ಸಂಭೋಗ ಮಾಡುವುದಿಲ್ಲ, ಅವನು ನಮ್ಮ ಗಂಡನಾಗಿದ್ದರೂ ಸಹ, ನಾವೇ ಗರ್ಭಿಣಿಯಾಗಲು ಬಯಸುವವರೆಗೆ ಸೆಕ್ಸ್‌ ಮಾಡುವುದಿಲ್ಲ.ನಮ್ಮ ಆಯ್ಕೆಯನ್ನು ನಿರಾಕರಿಸಿದರೆ, ನಿಮ್ಮ ಆಯ್ಕೆಯನ್ನು ಸಹ ನಿರಾಕರಿಸಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಗಮನಾರ್ಹವಾಗಿ, ಅಧ್ಯಕ್ಷ ಜೋ ಬೈಡೆನ್ ಕೂಡ ಸುಪ್ರೀಂ ಕೋರ್ಟ್ ನ ಈ ನಿರ್ಧಾರವನ್ನು ಖಂಡಿಸಿ ಮಹಿಳೆಯರ ಪರ ನಿಂತಿದ್ದಾರೆ.

ಮೊಣಕಾಲು ನೋವಿಗೆ ಕೇವಲ 40 ರೂಪಾಯಿ ಚಿಕಿತ್ಸೆ  ಪಡೆಯುತ್ತಿರುವ ಧೋನಿ 

 

ಮತ್ತಷ್ಟು ಸುದ್ದಿಗಳು

vertical

Latest News

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...

ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್ ತೀರ್ಪು

newsics.com ಎರ್ನಾಕುಳಂ:  ಮದುವೆಯಾದ ಬಳಿಕ ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವ   ಪ್ರವೃತ್ತಿ ಇರುವವರಿಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನೀನು ಅವರಷ್ಟು ಸುಂದರವಾಗಿಲ್ಲ ಎಂದು ಮೂದಲಿಸುತ್ತಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್...
- Advertisement -
error: Content is protected !!