newsics.com
ವಾಷಿಂಗ್ಟನ್: ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಹತ್ಯೆ ಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರ ಶಿಬಿರಗಳನ್ನು ನಾಶಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸಲು ಎಲ್ಲ ಸಿದ್ದತೆ ನಡೆಸಿತ್ತು. ಇದನ್ನು ಅರಿತ ಭಾರತ ಕೂಡ ಅದಕ್ಕೆ ತಕ್ಕ ಉತ್ತರ ನೀಡಲು ಪ್ರತಿತಂತ್ರ ಹೆಣೆದಿತ್ತು ಎಂಬ ಸ್ಫೋಟಕ ಮಾಹಿತಿ ಇದೀಗ ಹೊರ ಬಿದ್ದಿದೆ.
ಅಂದು ಅಮೆರಿಕದ ವಿದೇಶಾಂಗ ಸಚಿವರಾಗಿದ್ದ ಮೈಕ್ ಪೊಂಪೈ ಅವರು ತಮ್ಮ ಕೃತಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಹಿರಿಯ ನಾಯಕರ ಜತೆ ನಡೆಸಿದ ಮಾತುಕತೆಯಿಂದ ಅಣ್ವಸ್ತ್ರ ಯುದ್ಧ ತಪ್ಪಿದೆ. ಪಾಕಿಸ್ತಾನದಲ್ಲಿ ನಿಜವಾಗಿಯೂ ಆಡಳಿತದ ಮೇಲೆ ಹಿಡಿತ ಹೊಂದಿದ್ದವರ ಜತೆ ಮಾತುಕತೆ ನಡೆಸಲಾಗಿತ್ತು ಎಂದು ಹೇಳುವ ಮೂಲಕ ಪಾಕ್ ಸೇನಾ ಮುಖ್ಯಸ್ಥರ ಮನವೊಲಿಸಲಾಯಿತು ಎಂದು ಬಹಿರಂಗಪಡಿಸಿದ್ದಾರೆ.
2019ರ ಫೆಬ್ರವರಿ ತಿಂಗಳಲ್ಲಿ ಅಣ್ವಸ್ತ್ರ ಯುದ್ಧ ನಡೆಯುವ ಸಾಧ್ಯತೆ ಇತ್ತು ಎಂದು ಪೊಂಪೈ ಅಭಿಪ್ರಾಯಪಟ್ಟಿದ್ದಾರೆ