Newsics.com
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಿರ್ಣಾಯಕ ಹಂತ ತಲುಪಿದೆ. ಇನ್ನು ಐದು ರಾಜ್ಯಗಳ ಫಲಿತಾಂಶ ಪ್ರಕಟಗೊಳ್ಳಬೇಕಿದೆ. ಇದುವರೆಗಿನ ಮಾಹಿತಿ ಪ್ರಕಾರ ಈಗಲೂ ಡೆಮಾಕ್ರಟ್ ಅಭ್ಯರ್ಥಿ ಜೊ ಬಿಡೆನ್ ಮುನ್ನಡೆಯಲ್ಲಿದ್ದಾರೆ.
ಬಿಡೆನ್ 264 ಮತ್ತು ಟ್ರಂಪ್ 214 ಮತ ಪಡೆದಿದ್ದಾರೆ ಎಂದು ವರದಿಯಾಗಿದೆ. ಮ್ಯಾಜಿಕ್ ನಂಬರ್ 270. ಇದೇ ವೇಳೆ ಮತ ಎಣಿಕೆ ಮುಕ್ತಾಯ ಹಂತ ತಲುಪಿದ್ದು, ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಡೆಮಾಕ್ರಟ್ ಅಭ್ಯರ್ಥಿ ಜೊ ಬಿಡೆನ್ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
ಇನ್ನೊಂದೆಡೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ನ್ಯಾಯಬದ್ದವಾಗಿ ಮತ ಎಣಿಕೆ ನಡೆದರೆ ಗೆಲುವು ನನ್ನದೇ ಎಂದು ಟ್ರಂಪ್ ಹೇಳಿದ್ದಾರೆ.
ಈ ಮಧ್ಯೆ ಟ್ರಂಪ್ ಕೆಳ ನ್ಯಾಯಾಲಯದಲ್ಲಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದೆ ಎಂದು ವರದಿಯಾಗಿದೆ. ಈ ಸಂಬಂಧ ಅಧಿಕೃತ ಹೇಳಿಕೆ ಬಂದಿಲ್ಲ.
ಚುನಾವಣಾ ಅಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿಯೂ ಟ್ರಂಪ್ ಘೋಷಿಸಿದ್ದಾರೆ.