Newsics.com
ವಾಷಿಂಗ್ಟನ್: ಅಮೆರಿಕದ ಅಧ್ಯಕೀಯ ಚುನಾವಣೆಯ ಮತ ಎಣಿಕೆ ನಿರ್ಣಾಯಕ ಘಟ್ಟ ತಲುಪಿದೆ. ಡೆಮಾಕ್ರಟ್ ಅಭ್ಯರ್ಥಿ ಜೊ ಬಿಡೆನ್ ಶ್ವೇತ ಭವನದ ಹಾದಿಯಲ್ಲಿದ್ದರೆ, ಟ್ರಂಪ್ ನಿರ್ಗಮನ ಬಹುತೇಕ ಖಚಿತ ಎಂಬ ಮುನ್ಸೂಚನೆ ಹೊರಹೊಮ್ಮಿದೆ.
ಬಿಡೆನ್ ಇದುವರೆಗೆ 253 ಇಲೆಕ್ಟೊರಲ್ ಕಾಲೇಜು ಮತ ಪಡೆದಿದ್ದಾರೆ. ಇದಕ್ಕೆ ಜಾರ್ಜಿಯಾದ ಮತ ಸೇರಿಸಿದರೆ ಅದು 264ಕ್ಕೆ ತಲುಪಲಿದೆ.
ಇದೇ ವೇಳೆ ಟ್ರಂಪ್ ಇದುವರೆಗೆ 214 ಮತ ಪಡೆದಿದ್ದಾರೆ.
ಬಹುಮತಕ್ಕೆ 270 ಮತಗಳ ಅಗತ್ಯ ಇದೆ. ಇನ್ನು ಚುನಾವಣಾ ಫಲಿತಾಂಶ ಬರಬೇಕಾಗಿರುವ ಜಾರ್ಜಿಯಾ ದಲ್ಲಿ 16, ನಾರ್ಥ್ ಕರೋಲಿನಾದಲ್ಲಿ 15 ಮತ್ತು ನೇವಾಡದಲ್ಲಿ 06 ಮತಗಳು ಇವೆ. ಅಮೆರಿಕದ ಅಧ್ಯಕ್ಷ ಪದವಿಗೆ ಏರಬೇಕಾದರೆ ಬಿಡೆನ್ ಜಾರ್ಜಿಯಾದ ಜತೆ ಈ ಮೇಲಿನ ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಜಯಗಳಿಸಿದರೆ ಸಾಕು.
ಆದರೆ ಟ್ರಂಪ್ ಎಲ್ಲ ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಬೇಕಾಗಿದೆ.
ಇದೇ ವೇಳೆ ಟ್ರಂಪ್ ವಿರುದ್ದ ಅಮೆರಿಕದ ಸುದ್ದಿ ವಾಹಿನಿಗಳಲ್ಲಿ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಟ್ರಂಪ್ ಅಸಂವಿಧಾನಿಕ ಪದಗಳನ್ನು ಬಳಸಿ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಚುನಾವಣೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.