ವಾಷಿಂಗ್ಟನ್:ಚೀನಾ ಮೂಲದ ಟಿಕ್ ಟಾಕ್ ಆಪ್ ನಿಷೇಧದ ಬಗ್ಗೆ ಅಮೆರಿಕ ಗಂಭೀರವಾಗಿ ಯೋಚಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟಿಕ್ ಟಾಕ್ ದೇಶದ ಭದ್ರತೆಗೆ ಅಪಾಯಕಾರಿ ಎಂಬ ವರದಿಯನ್ನು ಅಮೆರಿಕದ ಗುಪ್ತಚರ ಅಧಿಕಾರಿಗಳು ಈಗಾಗಲೇ ನೀಡಿದ್ದಾರೆ. ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನು ಕೂಡ ಇದು ಕದಿಯುತ್ತಿದೆ ಎಂಬ ಗಂಭೀರ ಆರೋಪವನ್ನು ಕೂಡ ಟಿಕ್ ಟಾಕ್ ಎದುರಿಸುತ್ತಿದೆ.
ಅಮೆರಿಕದ ನಿಲುವನ್ನು ಸ್ಪಷ್ಟಪಡಿಸಿರುವ ಟ್ರಂಪ್ ನಿಷೇಧದ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದೇವೆ. ಜತೆಗೆ ಪರ್ಯಾಯ ಕ್ರಮಗಳ ಬಗ್ಗೆ ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ. ಈ ಮಧ್ಯೆ ನಿಷೇಧ ರದ್ದುಪಡಿಸುವುದನ್ನು ತಪ್ಪಿಸಲು ಟಿಕ್ ಟಾಕ್ ಅಮೆರಿಕದಲ್ಲಿನ ವ್ಯವಹಾರದ ಹೊಣೆಯನ್ನು ಅಮರಿಕದ ಸಂಸ್ಥೆಗೆ ನೀಡುವ ಬಗ್ಗೆ ಕೂಡ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.