ನ್ಯೂಯಾರ್ಕ್: ಜಾಗತಿಕ ಹೆಲ್ತ್ ಕೇರ್ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ತಯಾರಿಸಿರುವ ಲಸಿಕೆ ಕೊರೋನಾ ಸೋಂಕಿತ ಕೋತಿಗಳನ್ನು ಗುಣಪಡಿಸಿದೆ.
ಇದೇ ಲಸಿಕೆಯನ್ನು ಈಗ ಮನುಷ್ಯರ ಮೇಲೂ ಪ್ರಯೋಗಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಜಾನ್ಸನ್ ಅಂಡ್ ಜಾನ್ಸನ್ ಹೇಳಿದೆ.
ಇದೇ ಕಾರಣಕ್ಕಾಗಿಯೇ ಜಾನ್ಸನ್ ಅಂಡ್ ಜಾನ್ಸನ್ ತಯಾರಿಸಿರುವ ಲಸಿಕೆ ಜಗತ್ತಿನ ಗಮನ ಸೆಳೆಯುತ್ತಿದೆ. ಸಂಸ್ಥೆ ತಯಾರಿಸಿರುವ ಲಸಿಕೆಯನ್ನು ಸಾರ್ಸ್-ಸಿಒವಿ-2 ಸೋಂಕು ತಗುಲಿರುವ ಕೋತಿಗಳ ಮೇಲೆ ಪ್ರಯೋಗಿಸಲಾಗಿದ್ದು ಒಂದೇ ಡೋಸ್’ಗೆ ಸಾಕಷ್ಟು ಪರಿಣಾಮ ಬೀರಿದ್ದು, ಸೋಂಕು ಗುಣಮುಖವಾಗುತ್ತಿರುವ ಲಕ್ಷಣಗಳು ಕಾಣಿಸಿವೆ ಎಂದು ಕಂಪನಿ ಹೇಳಿಕೊಂಡಿದೆ.
ರೀಸಸ್ ಮಕಾಕ್ ಗಳಿಗೆ ಈ ಲಸಿಕೆ ಹಾಕಲಾಗಿದ್ದು, ಇದೇ ಲಸಿಕೆಯನ್ನು ಈಗ ಮನುಷ್ಯರ ಮೇಲೂ ಪ್ರಯೋಗಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅಧ್ಯಯನದಲ್ಲಿ ತೊಡಗಿದ್ದ ಸಂಶೋಧಕ ಯುಎಸ್ ನಲ್ಲಿರುವ ಬೆತ್ ಇಸ್ರೇಲ್ ಡಿಕಾನೆಸ್ ಮೆಡಿಕಲ್ ಸೆಂಟರ್ (ಬಿಐಡಿಎಂಸಿ) ನ ಡಾನ್ ಎಚ್. ಬರೂಚ್ ತಿಳಿಸಿದ್ದಾರೆ. ಜನವರಿಯಿಂದಲೂ ಡಾನ್ ಎಚ್. ಬರೂಚ್ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುವುದರಲ್ಲಿ ಮಗ್ನರಾಗಿದ್ದರು.
ಸಾಮಾನ್ಯ ಶೀತದ ವೈರಾಣು ಅಡೆನೊವೈರಸ್ ಸಿರೊಟೈಪ್ 26 (ಆಡ್ 26) ನ್ನು ಸಾರ್ಸ್-ಸಿಒವಿ-2 ಸ್ಪೈಕ್ ಪ್ರೊಟೀನ್’ನ್ನು ಹೋಸ್ಟ್ ಸೆಲ್’ಗಳಿಗೆ ರವಾನಿಸುತ್ತದೆ. ಇದರಿಂದ ಕೊರೋನಾ ವಿರುದ್ಧದ ರೋಗನಿರೋಧಕ ಹೆಚ್ಚುತ್ತದೆ ಎಂದು ಹೇಳಲಾಗಿದೆ.
ಕೊರೋನಾ ಸೋಂಕಿತ ಕೋತಿಗಳಿಗೆ ಲಸಿಕೆ; ಗುಣಾತ್ಮಕ ಫಲಿತಾಂಶ
Follow Us