Sunday, November 1, 2020

ಗಡೀಪಾರು ಆದೇಶ ಪ್ರಶ್ನಿಸಿ ಲಂಡನ್ ಸುಪ್ರೀಂಕೋರ್ಟ್ ಗೆ ಮಲ್ಯ ಅರ್ಜಿ

ಲಂಡನ್: ಭಾರತದಲ್ಲಿ ಬ್ಯಾಂಕ್ ಗಳಿಗೆ  ಕೋಟಿಗಟ್ಟಲೆ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ  ಉದ್ಯಮಿ ವಿಜಯ ಮಲ್ಯ ಇದೀಗ ಲಂಡನ್ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ತಮ್ಮ ಅರ್ಜಿಯಲ್ಲಿ ಅವರು ತಮ್ಮನ್ನು ಭಾರತಕ್ಕೆ ಗಡೀಪಾರುಗೊಳಿಸುವಂತೆ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. 20 ದಿನಗಳ ಹಿಂದೆ ಲಂಡನ್ ಹೈಕೋರ್ಟ್, ವಿಜಯ ಮಲ್ಯ ಗಡೀಪಾರಿಗೆ ಹಸಿರು ನಿಶಾನೆ ತೋರಿಸಿತ್ತು. ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳುವಂತೆ  ಗೃಹ ಸಚಿವಾಲಯಕ್ಕೆ ಸೂಚನೆ ನೀಡಿತ್ತು. ಭಾರತದಲ್ಲಿ ಎಸ್ ಬಿ ಐ ಸೇರಿದಂತೆ ಹಲವು ಬ್ಯಾಂಕ್ ಗಳಿಂದ ಸಾಲ ಪಡೆದಿದ್ದ  ವಿಜಯ ಮಲ್ಯ  ಸಾಲ ಮರು ಪಾವತಿ ಮಾಡದೆ ವಿದೇಶಕ್ಕೆ ಪರಾರಿಯಾಗಿದ್ದ. ವಿಜಯ ಮಲ್ಯ ದೇಶದಲ್ಲಿ ಹೊಂದಿರುವ  ಆಸ್ತಿಯನ್ನು  ಬ್ಯಾಂಕ್ ಗಳು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿವೆ.  ವಿಜಯ ಮಲ್ಯ ಸ್ಥಾಪಿಸಿದ ಕಿಂಗ್ ಫಿಶರ್ ಏರ್ ಲೈನ್ಸ್  ಸೇರಿದಂತೆ ಹಲವು ಸಂಸ್ಥೆಗಳು ಬಾಗಿಲು ಮುಚ್ಚಿವೆ.

ಮತ್ತಷ್ಟು ಸುದ್ದಿಗಳು

Latest News

ರಸ್ತೆಯಲ್ಲೇ ಪತ್ನಿಯ ಕತ್ತು ಸೀಳಿ ಹತ್ಯೆ

newsics.comಹಾಸನ: ರಸ್ತೆಯಲ್ಲಿ ಶನಿವಾರ ನಡೆದ ಗಂಡ ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ರಸ್ತೆ ಎನ್ನುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತನ್ನ...

RCB ವಿರುದ್ಧ ಗೆದ್ದು ಬೀಗಿದ ಹೈದರಾಬಾದ್

newsics.comಶಾರ್ಜಾ: ಇಲ್ಲಿನ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ 2020 ಆವೃತ್ತಿಯ 51ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಭರ್ಜರಿ ಗೆಲುವು ದಾಖಲಿಸಿದೆ.ಪಂದ್ಯದಲ್ಲಿ ಆರ್‌ಸಿಬಿ...

ಬಿಎಸ್‌ಪಿ ಟಿಕೆಟ್ ಪಡೆಯುವಲ್ಲಿ ವಿಫಲ; ವ್ಯಾಪಾರಿ ಆತ್ಮಹತ್ಯೆ

newsics.comಲಖನೌ: ಉತ್ತರ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾದ ಬಿಎಸ್ಪಿ ಮುಖಂಡ, ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೊಲೀಸರ ಮಾಹಿತಿಯಂತೆ, ಮೃತ ವ್ಯಕ್ತಿಯ ಬಳಿ ಡೆತ್‍ ನೋಟ್‍ ಪತ್ತೆಯಾಗಿದೆ. ಟಿಕೆಟ್‌ಗಾಗಿ...
- Advertisement -
- Advertisement -
error: Content is protected !!