ಲಂಡನ್: ನೀವು ವೇಗವಾಗಿ ನಡೀತಿರಾ? ಹಾಗಿದ್ದರೆ ನಿಮಗೆ ಕೊರೋನಾ ಬರಲ್ಲ ಬಿಡಿ. ಇದೇನ್ರಿ ತಮಾಷೆ ಅಂತಿದ್ದೀರಾ. ಖಂಡಿತ ಅಲ್ಲ. ಅಧ್ಯಯನ ವರದಿ ಇಂತಹದೊಂದು ಸಂಗತಿಯನ್ನು ಬಹಿರಂಗಗೊಳಿಸಿದೆ.
ಮೇಡ್ ಆರ್ ಎಕ್ಸಿವ್ ಎಂಬ ಜರ್ನಲ್’ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದ್ದು, ವ್ಯಕ್ತಿಯ ದೈಹಿಕ ಸಾಮರ್ಥ್ಯ, ಭವಿಷ್ಯದ ಕಾಯಿಲೆ ಹಾಗೂ ಅಂಗವಿಕಲತೆ ನಿರ್ಧರಿಸಲು ನಡಿಗೆಯ ವೇಗ ನೆರವಾಗಲಿದೆ ಎಂದು ಅಧ್ಯಯನ ವರದಿ ಹೇಳಿದೆ.
ಯುಕೆಯ ಬಯೋ ಬ್ಯಾಂಕ್’ನಲ್ಲಿ ನೋಂದಣಿ ಮಾಡಿಕೊಂಡ 4 ಲಕ್ಷಕ್ಕೂ ಅಧಿಕ ಜನರ ದತ್ತಾಂಶವನ್ನು ಸಂಶೋಧಕರು ಅಧ್ಯಯನಕ್ಕೆ ಒಳಪಡಿಸಿದ್ದು ಇವರ ಪೈಕಿ ಕೇವಲ 900 ಜನ ಕೊರೋನಾಗೆ ತುತ್ತಾಗುವ ಸಾಧ್ಯತೆ ಇರಬಹುದೆಂದು ಅಂದಾಜಿಸಲಾಗಿದೆ.
ಇದಲ್ಲದೇ ಸಾಮಾನ್ಯ ತೂಕಕ್ಕಿಂತ ಹೆಚ್ಚಿನ ತೂಕ ಅಂದ್ರೇ ಸ್ಥೂಲಕಾಯ ಹೊಂದಿದವರು ಕೊರೋನಾಗೆ ತುತ್ತಾಗುವ ಪ್ರಮಾಣ ಶೇಕಡಾ 49 ರಷ್ಟು ಹೆಚ್ಚಿದೆಯಂತೆ.
ಸ್ಥೂಲಕಾಯ ಮಾತ್ರವಲ್ಲದೆ ನಿಧಾನವಾಗಿ ನಡೆಯುವವರಿಗೂ ಕೊರೋನಾ ಬಾಧಿಸುವ ಸಾಧ್ಯತೆ ಹೆಚ್ಚಿದೆಯಂತೆ. ಗಂಟೆಗೆ ಮೂರು ಮೈಲಿಗಿಂತ ಕಡಿಮೆ ನಡೆಯೋರು ನೀವಾದ್ರೆ ನಿಮಗೆ ಕೊರೋನಾ ಬಂದ್ರು ಬರಬಹುದು ಅಂತಿದ್ದಾರೆ ಸಂಶೋಧಕರು.
ನಿಧಾನವಾಗಿ ನಡೆದರೆ ಬರುತ್ತೆ ಕೊರೋನಾ, ಹುಷಾರ್…!
Follow Us