newsics.com
ಬೀಜಿಂಗ್: ಚೀನಿಯರು ಮನಸ್ಸು ಮಾಡಿದರೆ ಏನ್ನನ್ನು ಸಾಧಿಸಬಹುದು ಎಂಬುದಕ್ಕೆ ಇಲ್ಲಿದೆ ಅತ್ಯುತ್ತಮ ಉದಾಹರಣೆ. ಕೇವಲ 28 ಗಂಟೆ 45 ನಿಮಿಷಗಳಲ್ಲಿ 10 ಅಂತಸ್ತಿನ ವಸತಿ ಯೋಗ್ಯ ಕಟ್ಟಡ ನಿರ್ಮಿಸಿದ್ದಾರೆ.
ಚೀನಾದ ಚಂಗ್ ಶಾ ನಗರದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಬ್ರಾಡ್ ಗ್ರೂಪ್ ಇದನ್ನು ನಿರ್ಮಿಸಿದೆ.
ಕಟ್ಟಡ ನಿರ್ಮಾಣ ಪ್ರಕ್ರಿಯೆಯ ವೀಡಿಯೊವನ್ನು ಸಂಸ್ಥೆ ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದೆ. ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮೊದಲೇ ಎಲ್ಲವನ್ನು ತಯಾರು ಮಾಡಿ ಬಳಿಕ ಆ ಪ್ರದೇಶದಲ್ಲಿ ಜೋಡಿಸುವ ತಂತ್ರಜ್ಞಾನ ಬಳಸಿಕೊಳ್ಳುವುದರ ಮೂಲಕ ಕಿರು ಅವಧಿಯಲ್ಲಿ ಬೃಹತ್ ಕಟ್ಟಡ ನಿರ್ಮಿಸಲಾಗುತ್ತಿದೆ.