newsics.com
ಲಿಟಲ್ ಹ್ಯಾಂಪ್ಟನ್ (ಯು.ಕೆ): ತಾನು ಗರ್ಭಧಾರಣೆ ಮಾಡಿದ್ದೇನೆ ಎಂದು ತಿಳಿಯದೇ ಇದ್ದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡು, ಎಂಟೇ ನಿಮಿಷಗಳಲ್ಲಿ ಆಕೆ ಗಂಡು ಮಗುವಿಗೆ ಜನ್ಮನೀಡಿದ್ದಾಳೆ.
ಟಿಲ್ಡಾ ಕಾಂಟಾಲಾ ಹೆಸರಿನ ಈ ಮಹಿಳೆಗೆ ಬೆಳಗ್ಗೆ ಏಳುವಾಗ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಹಾರದಲ್ಲಿ ಬದಲಾವಣೆಯಾದ ಕಾರಣ ಹೊಟ್ಟೆಯಲ್ಲಿ ಸಮಸ್ಯೆಯಾಗಿರಬಹುದು ಎಂದು ಟಿಲ್ಡಾ ಅಂದುಕೊಂಡಿದ್ದಳು. ಆದರೆ ಎಂಟೇ ನಿಮಿಷಗಳಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.
“ಮೊದಲಿಗೆ ನಾನು ಹೊಟ್ಟೆ ನೋವು ಅಂದುಕೊಂಡಿದ್ದೆ. ಬಳಿಕ ಒಳಗಿಂದ ಏನನ್ನೋ ತಳ್ಳಬೇಕೆನಿಸುವಂತೆ ಅನಿಸಿತು. ಆಗ ನಾನು ಮಗುವಿಗೆ ಜನ್ಮ ನೀಡಲಿದ್ದೇನೆ ಎಂದು ಅರಿವಾಯಿತು” ಎಂದು 23 ವರ್ಷದ ಟಿಲ್ಡಾ ತಿಳಿಸಿದ್ದಾರೆ.