newsics.com
ಯುಎಸ್’ಎ: ಹಲವು ಬಾರಿ ಗರ್ಭಪಾತಕ್ಕೊಳಗಾಗಿದ್ದ ಮಹಿಳೆಯೊಬ್ಬಳು 6.3 ಕೆಜಿ ತೂಕ ಹೊಂದಿರುವ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ಫಿನ್ಲೆ ಎಂದು ಹೆಸರಿಡಲಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ತಾಯಿ ಕ್ಯಾರಿಗೆ ಎರಡು ವರ್ಷದ ಇನ್ನೊಂದು ಮಗುವಿದೆ. ಫಿನ್ಲೆ ಜನಿಸುವ ಮೊದಲು ಈಕೆಗೆ ಎರಡು ಬಾರಿ ಗರ್ಭಪಾತವಾಗಿತ್ತು. ಮೊದಲನೇ ಮಗು ಜನಿಸುವ ಮೊದಲು ಕ್ಯಾರಿ 17 ಬಾರಿ ಗರ್ಭಪಾತ ಅನುಭವಿಸಿದ್ದಳು.
ತಮ್ಮ 30 ವರ್ಷಗಳ ವೃತ್ತಿ ಜೀವನದಲ್ಲಿ ಫಿನ್ಲಿಯಷ್ಟು ತೂಕದ ಮಗುವನ್ನು ನೋಡಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.