Saturday, April 17, 2021

ದೇಹದಿಂದ ಕಿಡ್ನಿ ಸ್ಟೋನ್ ಹೊರಹೋಗುತ್ತಿದೆ ಎಂದು ನಂಬಿ ಮಗುವಿಗೆ ಜನ್ಮ

newsics.com

ಬೋಸ್ಟನ್: ಅಮೆರಿಕದಲ್ಲಿ ಮಹಿಳೆಯೊಬ್ಬರಿಗೆ ಆಕೆ ಗರ್ಭಿಣಿಯಾಗಿದ್ದದ್ದು ಕೂಡ ತಿಳಿದಿರಲಿಲ್ಲವಂತೆ. ಇನ್ನೂ ಅಚ್ಚರಿ ಎಂದರೆ ಆಕೆ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

ಅಮೆರಿಕದ ಬೋಸ್ಟನ್ ನಲ್ಲಿ ಈ ಘಟನೆ  ವರದಿಯಾಗಿದೆ.  ಮೆಲಿಸಾ ಸರ್ಗೇ ಎಂಬ ಮಹಿಳೆ ಈ ರೀತಿ ಹೇಳಿಕೊಂಡಿದ್ದಾರೆ.

ನನ್ನ ಶರೀರದಿಂದ ಕಿಡ್ನಿ ಸ್ಟೋನ್ ಹೊರಹೋಗುತ್ತಿದೆ ಎಂದೇ ನಾನು ಭಾವಿಸಿದ್ದೆ. ಬೆಳಗ್ಗೆ ತುಂಬಾ ನೋವು ಕಾಡುತ್ತಿತ್ತು. ಶೌಚಾಲಯಕ್ಕೆ ತೆರಳಿದ್ದೆ.  ಬಳಿಕ ನೋಡಿದರೆ  ಮಗುವಿಗೆ ಜನ್ಮ ನೀಡಿದ್ದೆ  ಎಂದು ಅವರು ಹೇಳಿಕೊಂಡಿದ್ದಾರೆ.

ಅಮೆರಿಕದಂತಹ ದೇಶದಲ್ಲಿ ಇಂತಹ ಘಟನೆ ನಡೆದಿದೆ ಎಂದರೆ ನಂಬಲಿಕ್ಕೆ ಕಷ್ಟವಾಗುತ್ತಿದೆ.

ಒಂದೇ ದಿನ 1,26,789 ಮಂದಿಗೆ ಕೊರೋನಾ ಸೋಂಕು 685 ಜನರ ಸಾವು

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!