newsics.com
ಸ್ಪೇನ್: ಪೋರ್ನ್ ಸೈಟ್ ನಲ್ಲಿ ಮಹಿಳೆಯರ ಖಾಸಗಿ ವಿಡಿಯೋ ಕುರಿತು ಕೋರ್ಟ್ ನೀಡಿರುವ ತೀರ್ಪಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
2019ರಲ್ಲಿ ಸುಮಾರು 80 ಮಹಿಳೆಯರು ಸ್ಪೇನ್ ನ ಸೆರ್ವೋ ನಗರದಲ್ಲಿ ಮರುಕ್ಸೈನಾ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಹಿಳೆಯರು ಹೊರವಲಯದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ವ್ಯಕ್ತಿಯೊಬ್ಬ ರಹಸ್ಯ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಪೋರ್ನ್ ಸೈಟ್ ಗೆ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದ.
ಪೋರ್ನ್ ಸೈಟ್ ನಲ್ಲಿ ತಮ್ಮ ವಿಡಿಯೋಗಳನ್ನು ನೋಡಿದ ಮಹಿಳೆರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಇದೀಗ ತೀರ್ಪು ಬಂದಿದೆ.
ಸಾರ್ವಜನಿಕ ಪ್ರದೇಶದಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವುದನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಪಬಲೋ ಮುನೋಜ್ ವಾಕ್ಯೂಜ್ ಆದೇಶ ನೀಡಿದ್ದಾರೆ.
ತೀರ್ಪನ್ನು ಮರುಪರಿಶೀಲಿಸುವಂತೆ ಒತ್ತಡಗಳು ಕೇಳಿಬಂದಿವೆ. ಮಹಿಳೆಯರ ಅನುಮತಿಯಿಲ್ಲದೇ ಫೋಟೋ ಅಥವಾ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಪೋರ್ನ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವುದು ಲೈಂಗಿಕ ದೌರ್ಜನ್ಯವಾಗಿದೆ ಎಂದು ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.