newsics.com
ಚೀನಾ: ಪತಿ ಚಿಕ್ಕ ಬ್ರಾ ತಂದುಕೊಟ್ಟ ಎಂದು ಪತ್ನಿ ವಿಚ್ಛೇದನ ನೀಡಲು ಮುಂದಾದ ಘಟನೆ ನಡೆದಿದೆ.
ಚೀನಾದ ಗುಂಜಾವೋ ಪ್ರಾಂತ್ಯದ ನಿವಾಸಿಗಳಾದ ಲುವೋ ಹಾಗೂ ಯಾಂಗ್ ವಿವಾಹ ಔತಣಕೂಟ ಏರ್ಪಡಿಸಿದ್ದರು. ಆಗ ಪತಿ ಪತ್ನಿಗೆ ಬ್ರಾ ಒಂದನ್ನು ಉಡುಗೊರೆಯಾಗಿ ನೀಡಿದ್ದ. ಆದರೆ ಅದರ ಅಳತೆ ಚಿಕ್ಕದಾಗಿತ್ತು ಎಂದು ಆರೋಪಿಸಿದ ಪತ್ನಿ ತನ್ನ ಬ್ರಾ ಸೈಜನ್ನೇ ತಿಳಿಯದ ಪತಿ ಮುಂದೆ ತನ್ನನ್ನು ಹೇಗೆ ಕಾಳಜಿ ವಹಿಸುತ್ತಾನೆ ಎಂದು ಕೋಪಗೊಂಡು ವಿಚ್ಛೇದನ ಬೇಕೆಂದು ಪಟ್ಟುಹಿಡಿದಿದ್ದಾಳೆ. ಆಕೆಯ ಕುಟುಂಬಸ್ಥರು ಕೂಡ ಆಕೆಯ ವಾದವನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸದ್ದು ಮಾಡುತ್ತಿದೆ.