Wednesday, July 6, 2022

ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕೆ ಅಧ್ಯಯನ ಆರಂಭ

Follow Us

ವಾಷಿಂಗ್ಟನ್: ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕೆ ಅಧ್ಯಯನ ಸೋಮವಾರ ಆರಂಭವಾಗಿದೆ.
ಅಮೆರಿಕ ಸರ್ಕಾರ ಈ ಅಧ್ಯಯನ ಆರಂಭಿಸಿದ್ದು, 30 ಸಾವಿರ ಯೋಜಿತ ಸ್ವಯಂಸೇವಕರ ನೆರವಿನೊಂದಿಗೆ ಅಧ್ಯಯನ ನಡೆಯಲಿದೆ. 30 ಸಾವಿರ ಮಂದಿಯ ಪೈಕಿ ಹಲವರು ಅಂತಿಮ ಹಂತದ ಪರೀಕ್ಷೆಗೊಳಪಟ್ಟಿದ್ದಾರೆ.
ಈ ಲಸಿಕೆಯನ್ನು ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮಾಡರ್ನಾ ಇಂಕ್ ಅಭಿವೃದ್ಧಿಪಡಿಸಿದ್ದು, ಈವರೆಗೆ ಈ ಲಸಿಕೆ ಬಗ್ಗೆ ಯಾವುದೇ ಖಾತ್ರಿಯಾಗಿಲ್ಲ. ಅಮೆರಿಕದ ಸವನ್ನಾ, ಜಾರ್ಜಿಯಾದಲ್ಲಿ ಈ ಲಸಿಕೆಯನ್ನು ಹಾಕಲಾಗಿದೆ. ಸೋಂಕಿನ ಪ್ರಮಾಣ ಹೆಚ್ಚಾಗಿರುವ ಇತರ 84 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಡರ್ನಾ ತಿಳಿಸಿದೆ.

ಹದಿಮೂರು ವರುಷ ಐಸೋಲೇಷನ್’ನಲ್ಲೇ ಬದುಕು!

ಚೀನಾ ಮತ್ತು ಬ್ರಿಟನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮೊದಲ ಹಂತದಲ್ಲಿದ್ದು, ಈ ತಿಂಗಳ ಆರಂಭದಲ್ಲಿ ಭ್ರಜಿಲ್ ಮತ್ತು ಮತ್ತಿತರ ಸೋಂಕುಪೀಡಿತ ರಾಷ್ಟ್ರಗಳಲ್ಲಿ ಸಣ್ಣ ರೀತಿಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಆದರೆ, ಅಮೆರಿಕ ದೇಶದಲ್ಲಿ ಬಳಸಬಹುದಾದ ಯಾವುದೇ ಲಸಿಕೆಯ ಬಗ್ಗೆ ತನ್ನದೇ ಆದ ಪರೀಕ್ಷೆಗಳನ್ನು ಬಯಸುತ್ತದೆ. ಹೀಗಾಗಿ ಅಮೆರಿಕ ಪ್ರತ್ಯೇಕ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ. ಬೃಹತ್ ಅಧ್ಯಯನ ಕೇವಲ ಪರೀಕ್ಷೆ ಮಾತ್ರವಲ್ಲ, ಈ ಕಾರ್ಯದಲ್ಲಿ ಲಸಿಕೆಯ ಸುರಕ್ಷತೆಯನ್ನು ಪರಿಶೀಲಿಸಲಾಗುತ್ತದೆ. ಅಕ್ಸ್ ಫರ್ಡ್ ವಿವಿ ಲಸಿಕೆ ಮೇಲಿನ ಅಂತಿಮ ಪರೀಕ್ಷೆ ಆಗಸ್ಟ್’ನಲ್ಲಿ, ಸೆಪ್ಟೆಂಬರ್’ನಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಮತ್ತು ಅಕ್ಟೋಬರ್’ನಲ್ಲಿ ನೋವಾವಾಕ್ಸ್ ಪರೀಕ್ಷೆಗಳು ನಡೆಯಲಿವೆ.

ಉತ್ತರ ಕೊರಿಯಾದಲ್ಲಿ ಮೊದಲ ಕೊರೋನಾ ಪ್ರಕರಣ: ಗಡಿ ನಗರದಲ್ಲಿ ಲಾಕ್ ಡೌನ್

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!