newsics.com
ಬರ್ಮಿಂಗ್ಹ್ಯಾಮ್ : ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್ ಕಾಮನ್ವೆಲ್ತ್ ಗೇಮ್ಸ್ನ ಮಹಿಳೆಯರ ಫ್ರೀ ಸ್ಟೈಲ್ 62 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಕೇವಲ 70 ಸೆಕೆಂಡುಗಳಲ್ಲಿ ವಿಜಯ ಸಾಧಿಸಿದ್ದಾರೆ. ಈ ಮೂಲಕ ಸೆಮಿಫೈನಲ್ಗೆ ಸಾಕ್ಷಿ ಪ್ರವೇಶಿಸಿದ್ದು ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ.
2014ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸಾಕ್ಷಿ ಬೆಳ್ಳಿ ಪದಕ ಹಾಗೂ 2018ರಲ್ಲಿ ಕಂಚಿನ ಪದಕ ಗೆದಿದ್ದಾರೆ. ಈ ಬಾರಿಯ ಸೆಮಿ ಫೈನಲ್ನಲ್ಲಿ ಸಾಕ್ಷಿ ಕ್ಯಾಮರೂನ್ನ ಬರ್ತೆ ಎಮಿಲಿಯೆನ್ ಎಟಾನೆ ನ್ಗೊಲ್ಲೆರನ್ನು ಎದುರಿಸಲಿದ್ದಾರೆ