newsics.com
ಬರ್ಮಿಂಗ್ಹ್ಯಾಮ್ : ಭದ್ರತಾ ಹಿತದೃಷ್ಠಿಯಿಂದಾಗಿ ಬರ್ಮಿಂಗ್ಹ್ಯಾಮ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ನ ಕುಸ್ತಿ ಪಂದ್ಯದ ಸ್ಥಳವನ್ನು ಖಾಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಭದ್ರತೆಯ ಪರಿಶೀಲನೆಗಾಗಿ ನಾವು ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತಿದ್ದೇವೆ. ಸುರಕ್ಷತೆ ಖಚಿತವಾದ ಬಳಿಕ ನಾವು ಮತ್ತೆ ಪಂದ್ಯವನ್ನು ಆರಂಭಿಸಲಿದ್ದೇವೆ ಎಂದು ಯುನೈಟೆಡ್ ವರ್ಲ್ಡ್ ವ್ರಸ್ಲಿಂಗ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಕುಸ್ತಿ ಪಂದ್ಯದ ಸ್ಥಳವನ್ನು ಖಾಲಿ ಮಾಡುವ ಮುನ್ನ ಒಂಬತ್ತು ಪಂದ್ಯಗಳನ್ನು ಪೂರ್ಣಗೊಳಿಸಲಾಗಿದೆ.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 112 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ