ವಿದೇಶಿ ಮಟ್ಟದಲ್ಲಿ ಕೂಡ 2019ನೇ ಸಾಲಿನಲ್ಲಿ ಅನೇಕ ಬೆಳವಣಿಗೆಗಳು ಗಮನ ಸೆಳೆದವು. ಮಾ. 14 –ನ್ಯೂಜಿಲೆಂಡ್ ನ ಮೇಲೆ ಉಗ್ರರ ನಡೆಸಿದ ದಾಳಿಯಲ್ಲಿ 49 ಜನರು ಹತ್ಯೆಗೊಳಗಾದರು. ಏ. 21ರಂದು ಶ್ರೀಲಂಕಾದಲ್ಲಿ ಈಸ್ಟರ್ ದಿನ ಪಂಚತಾರಾ ಹೋಟೆಲ್, ಚರ್ಚ್ ಗಳ ಮೇಲೆ ಉಗ್ರರ ದಾಳಿ, 5 ಕನ್ನಡಿಗರು ಸೇರಿ 290 ಜನರ ಸಾವು. ಪುಲ್ವಾಮಾ ದಾಳಿ ಸೇರಿ ಭಾರತದ ಅನೇಕ ಉಗ್ರ ದಾಳಿಯ ರೂವಾರಿಯಾಗಿದ್ದ ಮೌಲಾನಾ ಮಸೂರ್ ಅಜರ್ ಅನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿತು. ಇದು ವಿಶ್ವಮಟ್ಟದಲ್ಲಿ ಭಾರತಕ್ಕೆ ಲಭಿಸಿದ ಬಹುದೊಡ್ಡ ಗೆಲುವಾಗಿದೆ.
ಯೂರೋಪಿಯನ್ ಒಕ್ಕೂಟದಿಂದ ಹೊರ ಬರುವ (ಬ್ರೆಕ್ಸಿಟ್) ಒಪ್ಪಂದದ ಕುರಿತ ವಿರೋಧದಿಂದ ಥೆರೇಸಾ ಮೇ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಮಂಡಿಸಿದ ತಿದ್ದುಪಡಿ ಬ್ರೆಕ್ಸಿಟ್ ಒಪ್ಪಂದಕ್ಕೆ ಕೊನೆಗೂ ಬ್ರಿಟನ್ ಸಂಸತ್ತು ಅನುಮೋದನೆ ನೀಡಿತು.
ಇನ್ನೊಂದೆಡೆ, ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಅಲೆ ಜೋರಾಗಿದ್ದು, ಅವರ ಮಹಾಭಿಯೋಗದ ಪ್ರಕ್ರಿಯೆ ಆರಂಭಗೊಂಡಿದೆ.