Monday, December 11, 2023

ಯೋಗದ ಮೂಲ ಭಾರತವಲ್ಲ ನೇಪಾಳ: ಪ್ರಧಾನಿ ಒಲಿ ವಿವಾದಾತ್ಮಕ ಹೇಳಿಕೆ

Follow Us

newsics.com
ನೇಪಾಳ: 7ನೇ ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ನೇಪಾಳ ಪ್ರಧಾನಿ ಕೆ.ಪಿ ಒಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿದ್ದು ಭಾರತವಲ್ಲ ನೇಪಾಳ ಎಂದು ಹೇಳಿದ್ದಾರೆ. ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಭಾರತವೇ ಇರಲಿಲ್ಲ. ಮಹಾರಾಜರುಗಳ ರಾಜ್ಯವಿತ್ತೇ ಹೊರತು, ಭಾರತ ಅಸ್ಥಿತ್ವದಲ್ಲೇ ಇರಲಿಲ್ಲ. ಅನಾದಿ ಕಾಲದಿಂದಲೂ ನೇಪಾಳದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ. ಯೋಗದ ಮೂಲ ನೇಪಾಳ. ನಾವು ಯೋಗವನ್ನು ನಮ್ಮ ಕೊಡುಗೆ ಎಂದು ಹೇಳಲಿಲ್ಲ. ಭಾರತ ಯೋಗ ಗುರು ಎಂದು ಎಲ್ಲಡೆ ಹೆಸರು ಪಡೆದುಕೊಂಡಿದೆ ಎಂದು ಒಲಿ ಶರ್ಮಾ ಹೇಳಿದ್ದಾರೆ.
ಇದೀಗ ಒಲಿ ಶರ್ಮಾ ಹೇಳಿಕೆ ಭಾರತೀಯರ ಹಾಗೂ ನೇಪಾಳಿಗರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಹಿಂದೆ ಶ್ರೀರಾಮನ ಜನ್ಮಸ್ಥಾನ ಆಯೋಧ್ಯೆ ಅಲ್ಲ ನೇಪಾಳದಲ್ಲಿ ಎಂದು ಕೆಪಿ ಒಲಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 

ಮೈತ್ರೀಂ ಭಜತ…

ಮತ್ತಷ್ಟು ಸುದ್ದಿಗಳು

vertical

Latest News

ನಿನ್ಗೆ ಹುಚ್ಚು ನಾಯಿ ಕಚ್ಚಿದ್ಯಾ? ; ಬಿಜೆಪಿ ವಿರುದ್ಧ ಲಕ್ಷ್ಮಣ್‌ ಸವದಿ ಕೆಂಡಾಮಂಡಲ

  newsics.com ಬೆಳಗಾವಿ: ರೈತರು  ದೇವರ ಸಮಾನ,  ರೈತರ ಹಣ ತಿಂದ ಮಾಲೀಕರು ಉದ್ಧಾರ ಆಗಲ್ಲ. ಅವರಿಗೆ ಮೋಸ ಮಾಡಬೇಡಿ ಎಂದು  ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ...

ಹಸುಗಳ ಮೇಲೆ ಆ್ಯಸಿಡ್‌ ಎರಚಿದ ಬೆಂಗಳೂರಿನ ವೃದ್ಧೆ

newsics.com ನೆಲಮಂಗಲ:  ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಜೋಸೆಫ್ ಗ್ರೇಸ್ (76 ವರ್ಷ)  ಎನ್ನುವ ಮಹಿಳೆ ಮನೆ...

ಆಸ್ತಿಗಾಗಿ ತಂದೆ-ತಾಯಿಯನ್ನೇ ಕೊಲೆಗೈದಿದ್ದ ಮಗ ಅರೆಸ್ಟ್​

newsics.com ದೇವನಹಳ್ಳಿ:  ಆಸ್ತಿಗಾಗಿ ಹೆತ್ತ ತಂದೆ-ತಾಯಿಯನ್ನೇ ಕೊಲೆಗೈದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಮಗ ನರಸಿಂಹಮೂರ್ತಿ ತಪ್ಪೊಪ್ಪಿಕೊಂಡಿದ್ದಾನೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ವೃದ್ಧ ದಂಪತಿ ಯನ್ನು ಕೊಲೆಗೈದಿದ್ದ ಮಗನನ್ನು ಪೊಲೀಸರು...
- Advertisement -
error: Content is protected !!