newsics.com
ಸಿಂಗಾಪುರ: ಭಾರತೀಯ ಮೂಲದವರು ಎಂದು ಭಾವಿಸಿ ಮಹಿಳೆ ಮತ್ತು ಮಗಳನ್ನು ಚೀನಾದ ಕ್ಯಾಬ್ ಚಾಲಕನೊಬ್ಬ ನಿಂದಿಸಿರುವ ಘಟನೆ ಸಿಂಗಾಪುರದಲ್ಲಿ ನಡೆದಿದೆ
ಯುರೇಷಿಯನ್ ಮೂಲದ ಜಾನೆಲ್ಲೆ ಹೋಡೆನ್ ಮತ್ತು ಅವರ ಮಗಳು ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಚೀನಾ ಚಾಲಕ ನೀವೂ ಭಾರತೀಯರು ಮೂರ್ಖರು, ನಾನು ಚೈನೀಸ್ ಎಂದು ನಿಂದಿಸಿದ್ದಾನೆ. ಮಹಿಳೆ ಅದನ್ನು ರೆಕಾರ್ಡ್ ಮಾಡಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ನಾನು ಕಪ್ಪು ಚರ್ಮದವಳಾಗಿದ್ದರೂ, ಭಾರತೀಯಳಾಗಿದ್ದರೂ ಅಥವಾ ಆಗಿರದೇ ಇದ್ದರೂ ಇದು ಸರಿಯಲ್ಲ. ಆತ ಜನಾಂಗೀಯ ನಿಂದನೆ ಮಾಡಿದ ಎಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸುವುದಾಗಿ ಕ್ಯಾಬ್ ಕಂಪನಿ ತಿಳಿಸಿದೆ.
ನಾಳೆಯ ಬೆಂಗಳೂರು ಬಂದ್ ಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಆಟೋ, ಓಲಾ, ಉಬರ್