newsics.com
ಮಾಸ್ಕೋ: ಸೈಬೀರಿಯಾದಲ್ಲಿ 48,500 ವರ್ಷಗಳ ಹಿಂದಿನ ಝೋಂಬಿ ವೈರಸ್ ಪತ್ತೆಯಾಗಿದೆ.
ರಷ್ಯಾ, ಜರ್ಮನಿ ಹಾಗೂ ಫ್ರಾನ್ಸಿನ ವಿಜ್ಞಾನಿಗಳು ಜಂಟಿಯಾಗಿ ಅಧ್ಯಯನ ನಡೆಸಿ ರಷ್ಯಾದ ಶೀತಲ ಮರುಭೂಮಿಯಾಗಿರುವ ಸೈಬೀರಿಯಾದಲ್ಲಿ ಹಿಮದಡಿಯಲ್ಲಿ ಹೂತಿರುವ 24ಕ್ಕೂ ಹೆಚ್ಚು ವೈರಸ್ಗಳನ್ನು ಪತ್ತೆ ಹಚ್ಚಿದ್ದಾರೆ. ಒಂದು ವೈರಸ್ 48,500 ವರ್ಷಗಳಿಂದಲೂ ಕೆರೆಯೊಂದರಲ್ಲಿ ಹೆಪ್ಪುಗಟ್ಟಿದೆ ಎನ್ನಲಾಗಿದೆ.
ಈ ವೈರಸ್ಗೆ ‘ಝೋಂಬಿ ವೈರಸ್’ ಎಂದು ಹೆಸರಿಸಲಾದೆ. ವೈರಸ್ಗಳು ಸಹಸ್ರಾರು ವರ್ಷದಿಂದ ನೀರಿನಲ್ಲಿ ಹೆಪ್ಪುಗಟ್ಟಿದ್ದರೂ ಅವು ಇನ್ನೂ ಸಾಂಕ್ರಾಮಿಕವಾಗಿವೆ. ಎಂದರೆ ಇನ್ನೂ ರೋಗವನ್ನು ಹರಡುವ ಸಾಮರ್ಥ್ಯವನ್ನು ಉಳಿಸಿಕೊಂಡಿವೆ.