Monday, November 29, 2021

ಕೊರೋನಾದಿಂದ ಹೆಚ್ಚಳವಾಯ್ತೇ ಕೌಟುಂಬಿಕ ದೌರ್ಜನ್ಯ?

Follow Us

ಇತ್ತ ಒಂದು ವರ್ಗದ ಜನ ಮನೆಯಲ್ಲೇ ಇರಬೇಕಾದ ಈ ಸನ್ನಿವೇಶದಲ್ಲಿ ಕೌಟುಂಬಿಕ ಬಾಂಧವ್ಯವನ್ನು ಬಲಪಡಿಸಿಕೊಳ್ಳುತ್ತಿದ್ದರೆ ಇನ್ನೊಂದು ದುರ್ಬಲ ವರ್ಗ ಕೌಟುಂಬಿಕ ದೌರ್ಜನ್ಯವನ್ನು ಹೆಚ್ಚಿಸಿದೆ.

===

ನೆಯವರಿಗೆ, ಮಕ್ಕಳಿಗೆ, ಪಾಲಕರಿಗೆ ಸಮಯ ನೀಡಬೇಕೆಂದರೂ ಕೊಡಲಾಗದ ಅಸಹಾಯಕತೆಯುಳ್ಳವರಿಗೆ ಕೊರೋನಾ ಈಗ ಸಾಕಷ್ಟು ಸಮಯ ನೀಡಿದೆ. ಮನೆಯಲ್ಲೇ ಇರಲು ಎಷ್ಟೇ ಬೇಸರವೆಂದರೂ ಕೊನೆಯ ಪಕ್ಷ ಈಗಲಾದರೂ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತಲ್ಲ ಎನ್ನುವ ನೆಮ್ಮದಿ ಅನೇಕರದ್ದು. ಆದರೆ, ಇದೇ ಸಮಯದಲ್ಲಿ ಇನ್ನೊಂದು ಆಘಾತಕಾರಿ ಸುದ್ದಿ ಬಂದಿದೆ. ಅದು ವಿಕೃತ ಮನಸ್ಸಿನ ಜನರ ಕೌಟುಂಬಿಕ ದೌರ್ಜನ್ಯದ್ದು. ಎಷ್ಟೆಲ್ಲ ಕುಟುಂಬಗಳು ಸಮಾಧಾನಚಿತ್ತದಿಂದ ಪರಸ್ಪರ ಅರಿತುಕೊಂಡು ಬಾಳಲು ಯತ್ನಿಸುತ್ತಿದ್ದಾರೋ ಬಹುಶಃ ಅಷ್ಟೇ ಪ್ರಮಾಣದ ಕುಟುಂಬಗಳಲ್ಲಿ ಮಹಿಳೆಯರು ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಅವರು ಯಾರ ಬಳಿಯೂ ಹೇಳಿಕೊಳ್ಳಲಾಗದೆ, ಮನೆಯಿಂದ ಸ್ವಲ್ಪ ಸಮಯ ಆಚೆಗಿರಲೂ ಆಗದೆ ಒಳಗೇ ಬಂದಿಯಾಗಿದ್ದಾರೆ.
ಕುಟುಂಬ…ಎಲ್ಲರೂ ಅರಿತುಕೊಂಡು ಹೊಂದಾಣಿಕೆಯಿಂದ ಬಾಳಿದರೆ ಸ್ವರ್ಗ. ಆದರೆ, ವಿಕ್ಷಿಪ್ತ ಮನಸ್ಸಿನ ವ್ಯಕ್ತಿಗಳಿಂದ ಅದು ಘನಘೋರ ನರಕವೂ ಆಗಬಹುದು. ಈಗಂತೂ ಲಾಕ್ ಡೌನ್ ಸಮಯ. ಅಂಥ ಮನಸ್ಸಿನ ವ್ಯಕ್ತಿಗಳಿರುವ ಮನೆಗಳು ಈಗ ಮಹಿಳೆಯರ ಪಾಲಿಗೆ ಅಕ್ಷರಶಃ ಜೈಲಿನಂತಾಗಿವೆ. ಹೀಗಾಗಿ, ಹೊರಗೆ ಹೋಗಲೂ ಆಗದೆ, ಮನೆಯಲ್ಲೇ ಇರುವ ಗಂಡ, ಅತ್ತೆ, ಮೈದುನ, ಅತ್ತಿಗೆಯರನ್ನು ಸಂಭಾಳಿಸುತ್ತ ಬಸವಳಿಯುತ್ತಿದ್ದಾರೆ.
ಈ ಸಮಯ ಮುಗಿಯುವ ಹೊತ್ತಿಗೆ ಅದೆಷ್ಟು ಮಹಿಳೆಯರು ಮಾನಸಿಕವಾಗಿ ಸಮಸ್ಯೆ ಹೊಂದಿರುವ ವ್ಯಕ್ತಿಗಳಾಗಿ ರೂಪುಗೊಂಡಿರುತ್ತಾರೋ ಗೊತ್ತಿಲ್ಲ. ಏಕೆಂದರೆ, ಮಹಿಳೆಯರ ಸಹಾಯಕ್ಕಾಗಿ ಇರುವ ವನಿತಾ ಸಹಾಯವಾಣಿಗೆ ಪ್ರತಿದಿನ ಬರುವ ಕರೆಗಳ ಸಂಖ್ಯೆಯಲ್ಲಿ ದ್ವಿಗುಣವಾಗಿದೆಯಂತೆ. ಇದು ನಿಜಕ್ಕೂ ಖೇದಕರ. ಮಹಿಳೆಯರು ಮಾನಸಿಕ ಸ್ವಾಸ್ಥ್ಯ ಹೆಚ್ಚಿಸಿಕೊಂಡು ಈ ದಿನಗಳನ್ನು ಕಳೆಯಬೇಕಿದೆ. ಸಹಜವಾಗಿ ಅವರಿಗೆ ಇದು ಪರೀಕ್ಷಾ ಸಮಯ. ಎಲ್ಲರೂ ಮನೆಯಲ್ಲಿ ಇರುವುದರಿಂದ ಅಡುಗೆ ಮನೆಯಲ್ಲೇ ಬಹುತೇಕ ಸಮಯ ಕಳೆಯಬೇಕಾಗಿದೆ. ಇದರಿಂದಾಗಿ ಅವರು ತಾಳ್ಮೆ ಕಳೆದುಕೊಳ್ಳುವ ಸಂಭವವೂ ಹೆಚ್ಚು. ಅಡುಗೆಯ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತ ಅದನ್ನೇ ರಾದ್ಧಾಂತ ಮಾಡುವ ಜನರೂ ಇದ್ದಾರೆ. ಅವರಿಗೆಲ್ಲ ಈ ಸಮಯದಲ್ಲಿ ತಿಳಿ ಹೇಳುವವರು ಯಾರು? ಗೊತ್ತಿಲ್ಲ.
ಮನಸ್ಸಿನ ಆರೋಗ್ಯಕ್ಕೆ ಏನೆಲ್ಲ ಮಾಡಬೇಕು?: 
• ಮಹಿಳೆಯರು ಹೇಗಾದರೂ ಮಾಡಿ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲೇಬೇಕು. ಹೀಗಾಗಿ, ಬಿಡುವಿನ ಸಮಯವಿದ್ದರೆ ಉತ್ತಮ ಪುಸ್ತಕ ಓದಿ. ದಿನವೂ ಸ್ವಲ್ಪ ಸಮಯ ದೇವರ ಧ್ಯಾನ ಮಾಡಿ. ಇದು ನಿಜಕ್ಕೂ ಪ್ರಯೋಜನಕಾರಿ.
• ಮಲಗುವ ಸಮಯದಲ್ಲಿ ಆ ದಿನ ನಿಮಗೆ ಕಷ್ಟವೆಂದು ಅನಿಸಿದ ಸಂದರ್ಭವನ್ನು ಮೆಲಕು ಹಾಕಿ ಅದಕ್ಕೆ ಕಾರಣರಾದವರನ್ನು ಕ್ಷಮಿಸಿಬಿಡಿ. ಮನದಲ್ಲಿ ಏನೂ ಇಟ್ಟುಕೊಳ್ಳದೆ ನಿದ್ದೆ ಮಾಡಿ.
• ಮನೆಯಲ್ಲಿ ಯಾರೋ ಒಬ್ಬರಿಂದಾಗಿ ಸಮಸ್ಯೆ ಸೃಷ್ಟಿಯಾಗುತ್ತಿದ್ದರೆ ಅವರನ್ನು ನಿಭಾಯಿಸಲು ಇತರರ ಸಹಾಯ ಪಡೆದುಕೊಳ್ಳಿ. ನೀವು ಅಹಂ ಬಿಟ್ಟು ಮುಕ್ತ ಮನಸ್ಸಿನಿಂದ ವರ್ತಿಸಿದರೆ ನಿಮಗೆ ಸಹಾಯ ಮಾಡಲು ಕುಟುಂಬಿಕರು ಖಂಡಿತ ಧಾವಿಸುತ್ತಾರೆ.
• ಇಲ್ಲಸಲ್ಲದ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಚಿಕ್ಕಪುಟ್ಟದ್ದಕ್ಕೆಲ್ಲ ನೀವೂ ತಲೆಕೆಡಿಸಿಕೊಳ್ಳಬೇಡಿ. ಮುಂದುವರಿಸಿದರೆ ಅದೇ ದೊಡ್ಡದಾಗುತ್ತದೆ. “ಒಂದು ಮಾತು ಬರುತ್ತದೆ, ಹೋಗುತ್ತದೆ’ ಎಂದು ಬಿಟ್ಟುಬಿಡಿ.
• ಮನಸ್ಥಿತಿ ತೀರ ಹದಗೆಟ್ಟಿದ್ದರೆ, ಎಷ್ಟೇ ಲಾಕ್ ಡೌನ್ ಎಂದರೂ ಮನೋರೋಗ ಶಾಸ್ತ್ರಜ್ಞರು ಆಸ್ಪತ್ರೆಯಲ್ಲಿ ಲಭ್ಯವಿದ್ದಾರೆ. ಅಲ್ಲಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿ.
• ಮನೆಯ ಇತರ ಸದಸ್ಯರು ಮಹಿಳೆಯರ ಕಷ್ಟ ಅರಿತು ಅವರಿಗೆ ಸಹಾಯ ಮಾಡುತ್ತ, ಎಲ್ಲರೂ ಒಂದಾಗಿ ಈ ಸಮಯವನ್ನು ಎದುರಿಸಿದರೆ ಬಹಳ ಒಳ್ಳೆಯದು. ಆಗ ಯಾರಿಗೂ ಹೊರೆಯಿರದು.

newsics.com@gmail.com

ಮತ್ತಷ್ಟು ಸುದ್ದಿಗಳು

Latest News

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು...

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು,...

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ

newsics.com ಬೆಂಗಳೂರು: ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 5 ನಗರ ಸಭೆ,...
- Advertisement -
error: Content is protected !!