- ಕಲ್ಗುಂಡಿ ನವೀನ್
response@134.209.153.225
ಮ್ಯಾಕ್ ಗಣಕಗಳನ್ನು ಅನೇಕರು ಅನೇಕ ಕಾರಣಗಳಿಗಾಗಿ ಬಳಸುತ್ತಾರೆ. ಇದು ಹೆಚ್ಚು ಸುರಕ್ಷಿತ ಎಂಬುದೂ ಒಂದು ಕಾರಣ. ಇದರಲ್ಲಿ ಕನ್ನಡ ಬರಬೇಕೆಂಬುದು ಬಹುಜನರ ಆಸೆಯಾಗಿದ್ದದ್ದು ಸಹಜ! ಗಣಕಗಳಲ್ಲಿ ಕನ್ನಡಕ್ಕಾಗಿ ಬಳಸುವ ನುಡಿ ಇಲ್ಲಿ ಬರಬೇಕೆಂಬುದು ಅನೇಕರ ಆಶಯವಾಗಿತ್ತು.
ಇದೀಗ ಆ ಆಶಯ ಈಡೇರಿದೆ! ಕಳೆದ ಆರು ತಿಂಗಳಿನಿಂದ ಮ್ಯಾಕ್ ಗಣಕ ವ್ಯವಸ್ಥೆಗಳಲ್ಲಿ ನುಡಿಯನ್ನು ಯಶಸ್ವಿ ಯಾಗಿ ಬಳಸಲಾಗುತ್ತಿದೆ. ಈಗಾಗಲೇ ಲಭ್ಯವಿದ್ದ ಮುಕ್ತ ತಂತ್ರಾಂಶವನ್ನು ಯುಕ್ತವಾಗಿ ಮಾರ್ಪಡಿಸಿ ನುಡಿಯನ್ನು ಬಳಸಲು ಅನುವು ಮಾಡಲಾಗಿದೆ. ಕನ್ನಡ ಗಣಕ ಪರಿಷತ್ತಿನ ಜಾಲತಾಣದಲ್ಲಿ ಇದು ಉಚಿತವಾಗಿ ಲಭ್ಯವಿದ್ದು ಯಾರು ಬೇಕಾದರು ಬಳಸಿಕೊಳ್ಳಬಹುದಾಗಿದೆ. ಇದಕ್ಕೆ ಬೇಕಾದ ಸಹಾಯ ಕಡತವನ್ನು ಸಹ ಕನ್ನಡ ಗಣಕ ಪರಿಷತ್ತಿನ ಜಾಲತಾಣದಲ್ಲಿ ಇರಿಸಲಾಗಿದೆ.
ಕೊಂಡಿ:
http://www.kagapa.in/kannada/sites/default/files/downloads/Nudi_Mac_OS.zip
ಸಹಾಯ ಕಡತಕ್ಕೆ ಕೊಂಡಿ:
http://www.kagapa.in/kannada/sites/default/files/downloads/Mac_OS_help.rtf