Tuesday, July 5, 2022

ವಿಶ್ವದ ಸುಸ್ಥಿರತೆಗೆ ಬೇಕು ಮಹಿಳೆಯರ ಸಹಭಾಗಿತ್ವ

Follow Us

ಫೆ.11- ‘ವಿಜ್ಞಾನ ಕ್ಷೇತ್ರದಲ್ಲಿರುವ ಮಹಿಳೆಯರು ಮತ್ತು ಹುಡುಗಿಯರ ಅಂತಾರಾಷ್ಟ್ರೀಯ ದಿನ’. ಮಹಿಳೆಯರು ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುವಂತಾಗಲು ವಿಶ್ವಸಂಸ್ಥೆಯ ಪ್ರಯತ್ನದ ಭಾಗವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.

♦ ಸಮಾಹಿತ
newsics.com@gmail.com


 ಮಾಜದ ಸಮತೋಲನಕ್ಕೆ ಗಂಡು-ಹೆಣ್ಣುಗಳ ಅನುಪಾತ ಸಮವಾಗಿರಬೇಕು. ಹಾಗೆಯೇ, ಒಟ್ಟಾರೆ ಜಾಗತಿಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಸಹ ಪುರುಷರಿಂದ ಮಾತ್ರ ಸಾಧ್ಯವಾಗದು. ಮಹಿಳೆಯರ ಸಕ್ರಿಯ ಪಾತ್ರ ಅತ್ಯಂತ ಅವಶ್ಯ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಇಂದು ಜಗತ್ತು ಮೊದಲಿನಂತಿಲ್ಲ. ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಹಾಗೂ ಸ್ವಾತಂತ್ರ್ಯ ಮಹಿಳೆಗಿದೆ. ಆದರೂ ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರ ಕೊರತೆ ಎದ್ದು ಕಾಣುತ್ತದೆ. ಸ್ಟೆಮ್ ಎಂದು ಕರೆಯಲಾಗುವ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತದ ಕ್ಷೇತ್ರಗಳಲ್ಲಿ ಮಹಿಳೆಯರ ಸಹಭಾಗಿತ್ವ ಅತ್ಯಂತ ಕಡಿಮೆ. ಹೀಗಾಗಿ, ಈ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶಾತಿ ಹೆಚ್ಚಿಸಲು ವಿಶ್ವ ಸಂಸ್ಥೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಪ್ರೇರಣೆ ನೀಡುತ್ತಿದೆ. ಹಾಗೂ ಪ್ರತಿ ವರ್ಷ ಫೆಬ್ರವರಿ 11ರಂದು “ವಿಜ್ಞಾನ ಕ್ಷೇತ್ರದ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಅಂತಾರಾಷ್ಟ್ರೀಯ ದಿನ’ವನ್ನು ಆಚರಿಸುತ್ತಿದೆ.
ಕೊರೋನಾ ವಿರುದ್ಧ ಮಹಿಳಾ ವಿಜ್ಞಾನಿಗಳ ಹೋರಾಟ
ಕೊರೋನಾ ಸೋಂಕಿನಿಂದ ಜಗತ್ತು ಕಂಗೆಟ್ಟಿರುವಾಗ ವಿಶ್ವದ ಎಲ್ಲ ರಾಷ್ಟ್ರಗಳು ಲಸಿಕೆ ಅಭಿವೃದ್ಧಿಪಡಿಸಲು ಶ್ರಮಿಸಿವೆ. ಭಾರತದಂಥ ಕೆಲವೇ ರಾಷ್ಟ್ರಗಳು ಈ ನಿಟ್ಟಿನಲ್ಲಿ ಯಶಸ್ಸು ಕಂಡರೆ, ಕೆಲವು ದೇಶಗಳಲ್ಲಿ ಈಗಲೂ ನಿರಂತರ ಪ್ರಯತ್ನ ನಡೆಯುತ್ತಿದೆ. ಕೊರೋನಾ ಲಸಿಕೆ ಕಂಡುಹಿಡಿಯುವುದರಿಂದ ಹಿಡಿದು, ಕೊರೋನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ಮಹಿಳಾ ವಿಜ್ಞಾನಿಗಳು, ವೈದ್ಯರು ಸಾಕಷ್ಟು ಶ್ರಮಿಸಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ವಿಶ್ವಸಂಸ್ಥೆ ಈ ಬಾರಿ, “ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಹಿಳಾ ವಿಜ್ಞಾನಿಗಳ ಮುಂಚೂಣಿ ಪಾತ್ರ’ ಎನ್ನುವ ಘೋಷವಾಕ್ಯದಡಿ ಈ ದಿನವನ್ನು ಆಚರಿಸುತ್ತಿದೆ.
ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಬೇಕು
2030ರ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಮಹಿಳೆಯರ ಪಾತ್ರ ಅಗತ್ಯ. ಕಳೆದ 15 ವರ್ಷಗಳಲ್ಲಿ ಮಹಿಳೆಯರನ್ನು ವಿಜ್ಞಾನ ಕ್ಷೇತ್ರಕ್ಕೆ ಕರೆತರುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಆದರೂ ಸಾಕಷ್ಟು ಹಿನ್ನಡೆ ಇದ್ದೇ ಇದೆ. ಪ್ರಸ್ತುತ, ಜಗತ್ತಿನ ಸಂಶೋಧನಾ ವಲಯದಲ್ಲಿ ಶೇ.30ಕ್ಕಿಂತಲೂ ಕಡಿಮೆ ಮಹಿಳೆಯರಿದ್ದಾರೆ. 2016ರ ಯುನೆಸ್ಕೋ ದತ್ತಾಂಶದ ಪ್ರಕಾರ, ಒಟ್ಟಾರೆ ವಿದ್ಯಾರ್ಥಿನಿಯರಲ್ಲಿ ಕೇವಲ ಶೇ.30ರಷ್ಟು ಮಂದಿ ಮಾತ್ರವೇ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್, ಮ್ಯಾತ್ಸ್) ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಶೇ.3ರಷ್ಟು, ಮೂಲವಿಜ್ಞಾನ, ಗಣಿತ ಮತ್ತು ಸಂಖ್ಯಾಶಾಸ್ತ್ರ ಕ್ಷೇತ್ರಕ್ಕೆ ಶೇ.5, ಇಂಜಿನಿಯರಿಂಗ್, ಉತ್ಪಾದನಾ ಮತ್ತು ನಿರ್ಮಾಣ ಕ್ಷೇತ್ರಕ್ಕೆ ಶೇ.8ರಷ್ಟು ಮಹಿಳೆಯರು ಪ್ರವೇಶಿಸುತ್ತಿದ್ದಾರೆ.
ಈ ದಿನದ ಅಂಗವಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಈ ಬಾರಿ ಒಂದು ಆಸಕ್ತಿಕರ ವಿಷಯದ ಕುರಿತು ಚರ್ಚೆ ನಡೆಯಲಿದೆ. ಅದೆಂದರೆ, ದೃಷ್ಟಿ ಸಮಸ್ಯೆಯುಳ್ಳ ಸಂಶೋಧನಾರ್ಥಿಗಳಿಗೆ ಬ್ರೈಲ್ ಲಿಪಿಯಲ್ಲಿ ಪಠ್ಯ ಒದಗಿಸುವ ಕುರಿತು ಚಿಂತನೆ ನಡೆಯುತ್ತಿದೆ. ಇದು ಸಹ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೇರಣಾದಾಯಕವಾಗುವುದರಲ್ಲಿ ಅನುಮಾನವಿಲ್ಲ.
ಸಂಶೋಧನಾ ವಲಯದಲ್ಲಿ ಸಾವಿರದ ಲೆಕ್ಕ
ಭಾರತದಲ್ಲೂ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೇ ಇದೆ. ನೀತಿ ಆಯೋಗದ ಮಾಹಿತಿ ಪ್ರಕಾರ, 2017ರಲ್ಲಿ ದೇಶದಲ್ಲಿ ಕೇವಲ 1509 ಮಹಿಳೆಯರು ವೈಜ್ಞಾನಿಕ ವಲಯದಲ್ಲಿದ್ದಾರೆ. ಈ ಪೈಕಿ ಶೇ.30ರಷ್ಟು ಮಹಿಳೆಯರು ದೇಶದ ದಕ್ಷಿಣ ವಲಯದಲ್ಲಿದ್ದಾರೆ. ಶೇ.19ರಷ್ಟು ಪೂರ್ವ ವಲಯ, ಶೇ.18ರಷ್ಟು ಉತ್ತರ ವಲಯ, ಶೇ.12ರಷ್ಟು ಮಧ್ಯ ವಲಯ, ಶೇ.10ರಷ್ಟು ಪಶ್ಚಿಮ ಹಾಗೂ ಶೇ.11ರಷ್ಟು ಈಶಾನ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರಲ್ಲಿ ಡಿಆರ್ ಡಿಒ, ಇಸ್ರೋದಂಥ ಸಂಸ್ಥೆಗಳಲ್ಲಿ ಶೇ.10ರಷ್ಟು ಮಹಿಳೆಯರಿದ್ದರೆ, ಕೃಷಿ ಸಂಶೋಧನಾ ವಲಯದಲ್ಲಿ ಶೇ.10, ವೈದ್ಯಕೀಯ ಸಂಶೋಧನೆಯಲ್ಲಿ ಶೇ.6, ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ವಲಯದಲ್ಲಿ ಶೇ.30, ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಯೋಗಾಲಯಗಳಲ್ಲಿ ಶೇ.40ರಷ್ಟು ಮಹಿಳೆಯರಿದ್ದಾರೆ ಎನ್ನುವ ದತ್ತಾಂಶವನ್ನೂ ನೀತಿ ಆಯೋಗ ನೀಡಿದೆ.
ವಿಜ್ಞಾನ, ಸಂಶೋಧನಾ ಕ್ಷೇತ್ರ ಪ್ರವೇಶಿಸುವ ಯುವ ವನಿತೆಯರ ಸಂಖ್ಯೆ ದುಪ್ಪಟ್ಟಾಗಲಿ. ಅವರಿಂದ ಹೊರಬರುವ ವಿಶಿಷ್ಟ ಪರಿಹಾರಗಳು, ಚಿಂತನೆಗಳು ಜಗತ್ತನ್ನು ತಣ್ಣಗಿಡಲಿ.

ಮತ್ತಷ್ಟು ಸುದ್ದಿಗಳು

vertical

Latest News

ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ವರ್ಗಾ

newsics.com ಬೆಂಗಳೂರು: ಅಕ್ರಮಗಳ ಅಡ್ಡೆ ಎಂಬ ಕುಖ್ಯಾತಿಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಅವರನ್ನು ವರ್ಗಾ ಮಾಡಲಾಗಿದೆ. ರಂಗನಾಥ್ ವಿರುದ್ಧ ಹಲವು ಆರೋಪಗಳು ಕೇಳಿ...

ಸಿಎಂ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಪ್ರಕರಣ: ಸಂಸದ ತೇಜಸ್ವಿ ಸೂರ್ಯ ವಿಚಾರಣೆ

newsics.com ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ. ದೆಹಲಿಯ ಅಶೋಕ್ ರಸ್ತೆಯಲ್ಲಿರುವ ಸಂಸದ ತೇಜಸ್ವಿ...

ದೇಶದಲ್ಲಿ ಹೊಸದಾಗಿ 13,086 ಕೊರೋನಾ ಸೋಂಕು ಪ್ರಕರಣ, 24 ಮಂದಿ ಸಾವು

newsics.com ನವದೆಹಲಿ: ದೇಶದಿಂದ ಕೊರೋನಾ ತೊಲಗಿಲ್ಲ. ಜನರ ನಿರ್ಲಕ್ಷ್ಯದಿಂದ ಮತ್ತೆ ವಕ್ಕರಿಸಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 13,086 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 12, 456 ಮಂದಿ...
- Advertisement -
error: Content is protected !!